ಕಿನ್ಯ ಗೋಲ್ಡನ್ ವೆಲ್ಫೇರ್ ಆರೋಗ್ಯ ಸೇವಾ ಸಂಸ್ಥೆಗೆ ಆಯ್ಕೆ

ಹಾಜಿ ಮೂಸಾ ಅಬ್ಬಾಸ್
ಮಂಗಳೂರು : ಗೋಲ್ಡನ್ ವೆಲ್ಫೇರ್ ಆರೋಗ್ಯ ಸೇವಾ ಸಂಸ್ಥೆ ಕಿನ್ಯ ಇದರ ಪ್ರಥಮ ವಾರ್ಷಿಕ ಸಭೆಯು ಬೆಳರಿಂಗೆ ಸ.ಹಿ.ಪ್ರಾ.ಶಾಲೆಯಲ್ಲಿ ಇತ್ತೀಚೆಗೆ ಜರುಗಿತು.
ನೂತನ ಸಾಲಿಯ ಅಧ್ಯಕ್ಷರಾಗಿ ಹಾಜಿ ಮೂಸಾ ಅಬ್ಬಾಸ್ ಕುರಿಯಕ್ಕಾರ್ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಮೊಯ್ದಿನ್ ಕುಂಞಿ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್ ಕಿನ್ಯ, ಕಾರ್ಯದರ್ಶಿ ಯಾಗಿ ಅಬ್ದುಲ್ ಖಾದರ್ ಪದಿಯರೆಕ್ಕಾರ್, ಖಜಾಂಚಿಯಾಗಿ ಹಾಜಿ ಅಬೂಬಕರ್ ಕಲ್ಲಾಂಡ, ಕಾರ್ಯಕಾರಿ ಸಮಿತಿ ಸಂಚಾಲಕರಾಗಿ ಹಾಜಿ ಅಬ್ದುಸ್ಸಲಾಮ್ ಪುದಿಯರೆಕ್ಕಾರ್, ಹಮೀದ್ ಕಿನ್ಯ, ಹಾಜಿ ಇಸ್ಮಾಯಿಲ್ ಪರಮಾಂಡ, ಫಾರೂಕ್ ಕಿನ್ಯ, ಮುಹಮ್ಮದ್ ಕಾಂಟ್ರಾಕ್ಟರ್, ಎನ್.ಕೆ.ಹಮೀದ್ ಕಿನ್ಯ, ಹನೀಫ್ ಸಾಗ್ ಬಾಗ್ ಬಹ್ರೈನ್, ಟಿ.ಕೆ.ಎಂ. ಕಿನ್ಯ ಬಹ್ರೈನ್, ಇಬ್ರಾಹೀಂ ಸಾಗ್ ಸೌದಿ ಅರೇಬಿಯಾ, ಅಬ್ಬಾಸ್ ಫಿರೋಝ್ ಕಿನ್ಯ ದುಬೈ, ವೈದ್ಯಕೀಯ ನಿರ್ದೇಶಕರಾಗಿ ಡಾ.ಮುಹಮ್ಮದ್ ಇಕ್ಬಾಲ್, ಗೌರವ ಸಲಹೆಗಾರರಾಗಿ ಹಾಜಿ ಕೆ.ಸಿ.ಇಸ್ಮಾಯೀಲ್ ಚಾಯರವಳಚ್ಚಿಲ್, ಹಾಜಿ ಅಬೂಸ್ವಾಲಿಹ್ ಕುರಿಯಕ್ಕಾರ್, ಹಾಜಿ ಅಲಿಕುಂಞಿ ಪಾರೆ, ಎನ್.ಕೆ. ಮುಹಮ್ಮದ್ ಕಿನ್ಯ ಆಯ್ಕೆಯಾಗಿದ್ದಾರೆ.





