ತುಮಕೂರು - ರಾಯದುರ್ಗ ರೈಲ್ವೇ ಯೋಜನೆ ಶೀಘ್ರ ಪೂರ್ಣ: ಸಚಿವ ವಿ.ಸೋಮಣ್ಣ

ಬೆಂಗಳೂರು, ಮಾ.16: ತುಮಕೂರು ಮತ್ತು ರಾಯದುರ್ಗ ರೈಲ್ವೇ ಯೋಜನೆಯನ್ನು ಹಂತಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬುಧವಾರ ವಿಧಾನಪರಿಷತ್ತಿನ ಕಲಾಪದಲ್ಲಿ ಅವರು, ಈ ಯೋಜನೆಯನ್ನು 2007-08ನೆ ಸಾಲಿನಿಂದ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ 50:50ರ ಅನುಪಾತದಲ್ಲಿ ಕೈಗೊಳ್ಳಲಾಗಿದೆ ಎಂದೂ ಹೇಳಿದರು.
ರಾಮದುರ್ಗ-ಕದಿರಿದೇವರಪಲ್ಲಿ ನಡುವಿನ 63.17 ಕಿಲೋಮೀಟರ್ ಉದ್ದದ ರೈಲ್ವೆ ಮಾರ್ಗ 2016-17 ರಿಂದ ಆರಂಭವಾಗಿದೆ. ಕದಿರಿದೇವರ ಪಲ್ಲಿ-ದೊಡ್ಡಹಳ್ಳಿ ಮಾರ್ಗವನ್ನು 2022-23ರಲ್ಲಿ ದೊಡ್ಡಹಳ್ಳಿ-ಕೊಟ್ಟಾಲಂ, ಕೊಟ್ಟಾಲಂ ಮಡಕಶಿರಾ, ಕೊರಟಗೆರೆ-ಊರು ಕೆರೆಮಾರ್ಗವನ್ನು 2024-25 ರಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
Next Story





