ಕುದ್ರೋಳಿ: ಎಸ್.ಕೆ.ಎಸ್.ಎಮ್ ವತಿಯಿಂದ ಧಾರ್ಮಿಕ ಪ್ರವಚನ
ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಮಂಗಳೂರು-ಕುದ್ರೋಳಿ ಘಟಕ ಹಾಗೂ ಎಸ್.ಕೆ.ಎಸ್.ಎಮ್ ಯೂತ್ ವಿಂಗ್ ಕುದ್ರೋಳಿ ಘಟಕದ ವತಿಯಿಂದ ಕುದ್ರೋಳಿಯ A1 ಭಾಗ್ ನಲ್ಲಿ ಮಾ.18ರಂದು ಸಂಜೆ 5:30 ರಿಂದ ರಾತ್ರಿ 9:30ರ ತನಕ ಧಾರ್ಮಿಕ ಪ್ರವಚನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕುದ್ರೋಳಿ ಸಲಫಿ ಮಸೀದಿಯ ಖತೀಬ್ ಶೇಖ್ ಸಾಖಿಬ್ ಸಲೀಮ್ ಉಮ್ರಿ ಉರ್ದು ಭಾಷೆಯಲ್ಲಿ ಪ್ರಾಸ್ತಾವಿಕ ಭಾಷಣ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮೌಲವಿ ಮುಸ್ತಫಾ ದಾರಿಮಿ “ಸಮುದಾಯದ ಜವಾಬ್ದಾರಿಗಳು” ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ, ಮೌಲವಿ ಅಹ್ಮದ್ ಅಲಿ ಖಾಸಿಮಿ “ಶಿಯಾ ವಿಶ್ವಾಸ ಸುನ್ನತ್ ಜಮಾತ್ ಹೆಸರಿನಲ್ಲಿ” ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ, ಪ್ರಸಿದ್ಧ ಭಾಷಣಕಾರ ಮೌಲವಿ ನಾಸಿರುದ್ದೀನ್ ರಹ್ಮಾನಿ “ಪ್ರಾರ್ಥನೆ, ಸಹಾಯಾರ್ಥನೆ ಅಲ್ಲಾಹನೊಂದಿಗೆ ಮಾತ್ರ” ಎಂಬ ವಿಷಯದಲ್ಲಿ ಮಲಯಾಳಂ ಭಾಷೆಯಲ್ಲಿ ಮಾತನಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಮ್ ಕುದ್ರೋಳಿ ಘಟಕದ ಅಧ್ಯಕ್ಷರಾದ ನಸೀರುದ್ದೀನ್ ಹೈಕೋ ರವರು ವಹಿಸಲಿದ್ದಾರೆ ಹಾಗೂ ಎಸ್.ಕೆ.ಎಸ್.ಎಮ್ ಕೇಂದ್ರ ಸಮಿತಿ ಅಧ್ಯಕ್ಷ ಬಶೀರ್ ಅಹ್ಮದ್ ಶಾಲಿಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಎಸ್.ಕೆ.ಎಸ್.ಎಮ್ ಕುದ್ರೋಳಿ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.