ಮಂಗಳೂರು ಆಯುಕ್ತಾಲಯ ವ್ಯಾಪ್ತಿಯ ಶ್ವಾನದಳಕ್ಕೆ ʼಬಬ್ಲಿʼ ಸೇರ್ಪಡೆ

ಮಂಗಳೂರು : ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಶ್ವಾನದಳಕ್ಕೆ ʼಬಬ್ಲಿʼ ಎಂಬ ಹೆಸರಿನ ಶ್ವಾನವು ಗುರುವಾರ ಸೇರ್ಪಡೆಯಾಗಿದೆ.
ಜರ್ಮನ್ ಶಪರ್ಡ್ ತಳಿಗೆ ಸೇರಿದ ಸುಮಾರು ಒಂದು ವರ್ಷ ಪ್ರಾಯದ ಈ ಶ್ವಾನವು ಬೆಂಗಳೂರು ಸಿಎಆರ್ ಅಡುಗೋಡಿ ಶ್ವಾನದಳ ತರಬೇತಿ ಕೇಂದ್ರದಲ್ಲಿ ಅಪರಾಧ ಪತ್ತೆ ತರಬೇತಿ ಪಡೆದಿತ್ತು.
ಪೊಲೀಸ್ ಸಿಬ್ಬಂದಿಗಳಾದ ಕುಶಾಲಪ್ಪಪೂಜಾರಿ ಮತ್ತು ರವಿಗೌಡ ಇದರ ಹ್ಯಾಂಡ್ಲರ್ ಆಗಿದ್ದಾರೆ. ಇದರೊಂದಿಗೆ ಕಮಿಷನರೇಟ್ ಶ್ವಾನದಳ ವಿಭಾಗದಲ್ಲಿರುವ ಶ್ವಾನಗಳ ಸಂಖ್ಯೆ ನಾಲ್ಕಕ್ಕೇರಿದೆ. ತಲಾ ಎರಡು ಶ್ವಾನಗಳು ಅಪರಾಧ ಹಾಗೂ ನಾರ್ಕೋಟಿಕ್ಸ್ ಪತ್ತೆಗೆ ಹಾಗೂ ಇನ್ನೊಂದನ್ನು ಸ್ಫೋಟಕ ಪತ್ತೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿನ ಅಪರಾಧ ಪತ್ತೆಯ ಕರ್ತವ್ಯಕ್ಕೆ ಈ ಶ್ವಾನವನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
Next Story