ಮಾ. 19ರಂದು ಗಂಗೊಳ್ಳಿಯಲ್ಲಿ ಮದ್ಯ ಮಾರಾಟ ನಿಷೇಧ
ಉಡುಪಿ : ಕುಂದಾಪುರ ತಾಲೂಕು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಾ.19ರಂದು ಕೊಂಕಣಿ ಖಾರ್ವಿ ಸಮಾಜದಿಂದ ಹೋಳಿಹಬ್ಬ ಆಚರಣೆ ನಡೆಯಲಿದ್ದು, ಈ ಪ್ರಯುಕ್ತ ನಡೆಯುವ ಮೆರವಣಿಗೆಯಲ್ಲಿ ೫೦೦೦ಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ.
ಗಂಗೊಳ್ಳಿ ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಇದಕ್ಕೆ ಹೊಂದಿಕೊಂ ಡಿರುವ ಗುಜ್ಜಾಡಿ, ಹೊಸಾಡು, ತ್ರಾಸಿ, ಮರವಂತೆ ಗ್ರಾಮಗಳಲ್ಲಿ ಈ ಸಂದರ್ಭದಲ್ಲಿ ಬಾರ್ ಹಾಗೂ ವೈನ್‌ಶಾಪ್ ಗಳು ತೆರೆದಿದ್ದರೆ ಗಲಭೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾ.19ರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಜ್ಜಾಡಿ, ಹೊಸಾಡು, ತ್ರಾಸಿ, ಮರವಂತೆ ಗ್ರಾಮದ ಎಲ್ಲಾ ಬಾರ್, ವೈನ್‌ಶಾಪ್ ಹಾಗೂ ಮದ್ಯಪಾನ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.
Next Story