ಹಾಸನ: ವಿದ್ಯಾರ್ಥಿನಿಯರಿಗೆ ಕ್ರೈಸ್ತ ಧರ್ಮದ ಪುಸ್ತಕ ನೀಡಿದ ಆರೋಪ; ಯುವಕನಿಗೆ ಹಲ್ಲೆ

ಹಾಸನ, ಮಾ.17: ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ಸಾರ್ವಜನಿಕರಿಗೆ ಕ್ರೈಸ್ತ ಧರ್ಮದ ಪುಸ್ತಕ ನೀಡಿ ಮತಾಂತರ ಮಾಡಲು ಪ್ರಚೋದನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಯುವಕನೋರ್ವನಿಗೆ ಥಳಿಸಿರುವ ಘಟನೆ ಹಾಸನದ ಶ್ರೀಗಂಧದ ಕೋಠಿ ಆವರಣದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮನು (30) ಎಂಬ ವ್ಯಕ್ತಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಯುವಕ 3 ದಿನಗಳಿಂದ ಕಾಲೇಜು ಬಳಿ ಬಂದು ಪುಸ್ತಕ ಹಂಚುತ್ತಿರುವುದಾಗಿ ಆರೋಪಿಸಲಾಗಿದೆ. ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಯುವಕನಿಗೆ ಥಳಿಸಿದವರ ವಿರುದ್ಧ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಹಲ್ಲೆಗೆ ಒಳಗಾದ ವ್ಯಕ್ತಿ ದೂರು ನೀಡಿಲ್ಲ. ಆದ್ದರಿಂದ ದೂರು ದಾಖಲು ಮಾಡಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ.
Next Story







