ಬೆಳಗಾವಿ: ವಿಚಾರಣಾಧೀನ ಕೈದಿ ಜೈಲಿನಿಂದ ಪರಾರಿ!

ಬೆಳಗಾವಿ, ಮಾ.18: ವಿಚಾರಣಾಧೀನ ಕೈದಿಯೋರ್ವ ಕಾರಾಗೃಹದಿಂದ ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಾರಾಗೃಹದಲ್ಲಿ ನಡೆದಿದೆ.
ಖಾದಿರ್ ಸಾಬ್ ರಝ ಖಾನ್(34) ಜೈಲಿನಿಂದಲೇ ಪರಾರಿಯಾದ ಕೈದಿಯಾಗಿದ್ದಾನೆ. ಜೈಲು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಸಬ್ ಜೈಲಿನ ಮುಖ್ಯ ದ್ವಾರದಿಂದಲೇ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹೆಚ್ಚುವರಿ ಎಸ್ಪಿ ಮಾನಿಂಗ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕೊಲೆ ಯತ್ನ, ಗಲಾಟೆ, ಜಾತಿ ನಿಂದನೆ ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ಖಾದಿರ್ ಸಾಬ್ ರಝ ಖಾನ್ ನನ್ನು 15 ದಿನಗಳ ಹಿಂದೆ ಬಂಧಿಸಲಾಗಿತ್ತು.
Next Story





