ಬೋಳಿಯಾರ್: 9ನೇ ತರಗತಿ ವಿದ್ಯಾರ್ಥಿ ನಾಪತ್ತೆ

ಕೊಣಾಜೆ, ಮಾ.18: ಬೋಳಿಯಾರ್ ಗ್ರಾಮ ವ್ಯಾಪ್ತಿಯ ಕಾಪಿಕಾಡು ನಿವಾಸಿ ಹೈದರ್ ಎಂಬವರ ಪುತ್ರ ಅಬ್ದುಲ್ ರಹಿಮಾನ್(16) ಮಾ.16ರಿಂದ ನಾಪತ್ತೆಯಾಗಿರುವುದಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಡಿಪು ಸರಕಾರಿ ಪ್ರೌಢ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಅಬ್ದುಲ್ ರಹಿಮಾನ್ ಬುಧವಾರ ಸಂಜೆ 5:30ರ ಬಳಿಕ ಕಾಣೆಯಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
Next Story