ಗುಜರಾತ್‌ನ ಪಠ್ಯಕ್ರಮದಲ್ಲಿ ಭಗವದ್ಗೀತೆ: ಸಚಿವರನ್ನು ಟೀಕಿಸಿದ ಎಎಪಿ ನಾಯಕ ಸಿಸೋಡಿಯಾ

ಹೊಸದಿಲ್ಲಿ : ಗುಜರಾತ್ ಸರಕಾರವು 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಭಗವದ್ಗೀತೆ ಪರಿಚಯಿಸುವ ಕುರಿತಾಗಿ ಘೋಷಿಸಿದ ಒಂದು ದಿನದ ನಂತರ ದಿಲ್ಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಇಂದು ಗುಜರಾತ್ ರಾಜ್ಯ ಸಚಿವರನ್ನು ಟೀಕಿಸುವ ಜೊತೆಗೆ ಈ ಕ್ರಮವನ್ನು ಸ್ವಾಗತಿಸಿದ್ದಾರೆ.
"ಖಂಡಿತವಾಗಿಯೂ ಇದು ಉತ್ತಮ ಹೆಜ್ಜೆ. ಆದರೆ ಅದನ್ನು ಪರಿಚಯಿಸುವ ಜನರು ಮೊದಲು ಗೀತಾ ಮೌಲ್ಯಗಳನ್ನು ಅಭ್ಯಾಸ ಮಾಡಬೇಕಾಗಿದೆ. ಅವರ ಕಾರ್ಯಗಳು ರಾವಣನಂತೆ ಹಾಗೂ ಅವರು ಗೀತಾ ಬಗ್ಗೆ ಮಾತನಾಡುತ್ತಾರೆ" ಎಂದು ಸಿಸೋಡಿಯಾ ANI ಗೆ ತಿಳಿಸಿದರು.
2022-23ರ ಶೈಕ್ಷಣಿಕ ವರ್ಷದಿಂದ ಗುಜರಾತ್‌ನಲ್ಲಿ 6 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಪಠ್ಯಕ್ರಮದ ಭಾಗವಾಗಿ ಭಗವದ್ಗೀತೆಯನ್ನು ಪರಿಚಯಿಸಲಾಗುವುದು ಎಂದು ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ಗುರುವಾರ ಹೇಳಿದ್ದಾರೆ.
Next Story





