ಪಕ್ಷಿಕೆರೆ: ಮಾ.19ರಿಂದ ಅರ್ರಿಫಾಯಿಯ್ಯ ದಫ್ ರಾತೀಬ್, ಜಲಾಲಿಯಾ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ
ಮುಲ್ಕಿ, ಮಾ. 18: ಬದ್ರಿಯಾ ಜುಮಾ ಮಸೀದಿ ಪಕ್ಷಿಕೆರೆ ಇದರ 41ನೇ ವಾರ್ಷಿಕ ಹಾಗೂ ನವೀಕೃತ ಮಸೀದಿಯ ವಕ್ಫ್ ನಿರ್ವಹಣೆ ಮತ್ತು ಉದ್ಘಾಟನಾ ಸಮಾರಂಭವು ಮಾ.19ರಿಂದ ಮಾ. 26ರ ವರೆಗೆ ನಡೆಯಲಿದೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅರ್ರಿಫಾಯಿಯ್ಯ ದಫ್ ರಾತೀಬ್, ಜಲಾಲಿಯಾ ಸ್ವಲಾತ್ ಮಜ್ಲಿಸ್, ಧಾರ್ಮಿಕ ಮತಪ್ರಭಾಷಣ ಹಾಗೂ ಭಾವೈಕ್ಯ ಸಮಾವೇಶಗಳು ನಡೆಯಲಿವೆ.
ಮತ ಪ್ರಭಾಷಣದ ಉದ್ಘಾಟನೆಯನ್ನು ಅಲ್ ಮದರಸತ್ತುನ್ನೂರಾನಿಯಾ ಪಕ್ಷಿಕೆರೆಯ ಸದರ್‌ಮುಅಲ್ಲಿಮ್ ಅಲ್ಹಾಜ್ ಮುಹಮ್ಮದ್ ಹನೀಫ್ ಸಾದಿ ನೆರವೇರಿಸುವರು. ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಕೆ.ಯು. ಮುಹಮ್ಮದ್ ನೂರಾನಿಯಾ ವಹಿಸುವರು. ದುಆ ಆಶೀರ್ವಚನವನ್ನು ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬೂರಾಶಿದ ಎಂ. ಆದಂ ಅಮಾನಿ ನೆರವೇರಿಸುವರು. ಅಲ್ ಮದರಸತ್ತುನ್ನೂ ರಾನಿಯಾದ ಮುಅಲ್ಲಿಮ್ ಕಲಂದರ್ ಶರೀಫ್ ಸಾದಿ ವಿಶೇಷ ಉಪನ್ಯಾಸ ನೀಡುವರು.
ಮಾ.20ರಂದು ಅಬ್ದುಲ್ ಲತೀಫ್ ಸಖಾಪಿ, ಕಾಂತಪುರಂ ಅವರ ನೇತೃತ್ವದಲ್ಲಿ ಮದನಿಯಂ ಮಜ್ಲಿಸ್ ನಡೆಯಲಿದೆ. ಮಾ.21ರಂದು ಭಾರತದ ಮುಸ್ಲಿಮರ ಗತ ವೈಭವ ಹಾಗೂ ಸವಾಲುಗಳು ಎಂಬ ವಿಷಯದ ಕುರಿತು ಹಾಫಿಳ್ ಮುಹಮ್ಮದ್ ಸುಫ್ಯಾನ್ ಸಖಾಫಿ ಮುಖ್ಯಪ್ರಭಾಷಣ ಮಾಡುವರು.
ಮಾ.22ರಂದು ಅಶ್ಫಾಕ್ ಫೈಝಿ ಅವರು ಪುಣ್ಯ ಸ್ವಹಾಬಿಗಳ ಆದರ್ಶ ಜೀವನ, ಮಾ.23ರಂದು ಅಬ್ದುಲ್ ಹಕೀಮ್ ಮದನಿ ಪಾಂಡವರ ಕಲ್ಲು ಅವರಿಂದ ದಾಂಪತ್ಯ ಜೀವನ ಇಸ್ಲಾಮಿನಲ್ಲಿ, ಮಾ.24ರಂದು ಅಸ್ಸಯ್ಯದ್ ಇಬ್ನು ಮೌಲಾನ ತಂಙಳ್ ಅಲ್ ಬುಖಾರಿ ನಾದಾಪುರಂ ಅವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಅಲ್ಲದೆ, ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬೂರಾಶಿದ ಎಮ್. ಆದಂ ಅಮಾನಿ ಅವರಿಂದ ಪ್ರವಾದಿ ಪ್ರೇಮ ಸಾಮ್ರಾಜ್ಯ ವಿಷಯದ ಕುರಿತು ಪ್ರಭಾಷಣ ಮಾಡುವರು.
ಮಾ.25ರಂದು ನವೀಕೃತ ಮಸೀದಿಯ ವಕ್ಪ್ ನಿರ್ವಹಣೆ ಹಾಗೂ ಉದ್ಘಾಟನಾ ಸಮಾರಂಭ ಮಧ್ಯಾಹ್ನ 12ಗೆ ನಡೆಯಲಿದ್ದು, ನೇತೃತ್ವವನ್ನು ಅಸ್ಸಯ್ಯದ್‌ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ವಹಿಸುವರು.
ಅದೇ ದಿನ ಸಂಜೆ ಭಾವೈಕ್ಯತಾ ಸಮಾವೇಶ ನಡೆಯಲಿದೆ. ಮಗ್ರಿಬ್ ನಮಾಝ್ ನ ಬಳಿಕ ಅಸ್ಸಯ್ಯದ್ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಜರುಗಲಿದೆ.
ಬಳಿಕ ಡಾ. ಫಾರೂಖ್ ನೀಮಿ ಕೊಲ್ಲಂ ಅವರು ಸ್ತ್ರೀ ಸ್ವಾತಂತ್ರ್ಯ ಇಸ್ಲಾಮಿನಲ್ಲಿ ವಿಷಯದ ಕುರಿತು ಪ್ರಭಾಷಣ ಮಾಡಲಿದ್ದಾರೆ.
ಮಾ.26ರಂದು ವಾರ್ಷಿಕ ದಫ್ ರಾತೀಬ್ ಕಾರ್ಯಕ್ರಮಜರುಗಲಿದೆ. ಸಂಜೆ 7ಗಂಟೆಗೆ ಡಾ. ಎಂ.ಬಿ. ಮಹಮೂದ್ ಮಂಜನಾಡಿ ಅವರ ನೇತೃತ್ವದಲ್ಲಿ ಸಂದಲ್ ಮೆರವಣಿಗೆ ನಡೆಯಲಿರುವುದು. ರಾತ್ರಿ 8 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದೆ. ಉದ್ಘಾಟನೆಯನ್ನು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಝ್ಘರ್ ಫೈಝಿ ಬೊಳ್ಳೂರು ಉಸ್ತಾದ್ ನೆರವೇರಿಸುವರು.
ಅಧ್ಯಕ್ಷತೆಯನ್ನು ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿಯ ಅಲ್ಹಾಜ್ ಕೆ.ಯು.ಮುಹಮ್ಮದ್ ನೂರಾನಿಯಾ ವಹಿಸುವರು. ಮುಖ್ಯ ಪ್ರಭಾಷಣವನ್ನು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ಅ ಧ್ಯಕ್ಷ ಮೌಲಾನಾ ಶಾಫಿ ಸಅದಿ ಬೆಂಗಳೂರು ಮಾಡುವರು. ಅಬೂರಾಶಿದ್ ಎಮ್. ಆದಂ ಅಮಾನಿ ಉಪಸ್ಥಿತರಿದ್ದರು ಎಂದು ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಮತ್ತು ರಿಯಾವುಲ್ ಇಸ್ಲಾಮ್ ಜಮಾಅತ್ ಕಮಿಟಿಯ ಪ್ರಕಟನೆ ತಿಳಿಸಿದೆ.







