ಕಾರ್ಕಳ ಉತ್ಸವ; ಸಂಭ್ರಮದ ಉತ್ಸವ ಮೆರವಣಿಗೆ

ಕಾರ್ಕಳ : ಕಾರ್ಕಳ ಉತ್ಸವ-2022 ಅಂಗವಾಗಿ ಅಪೂತಪೂರ್ವ ಉತ್ಸವ ಮೆರವಣಿಗೆ ಕಾರ್ಕಳ ಬಂಡೀಮಠ ದಿಂದ ಪೇಟೆ ಮಾರ್ಗವಾಗಿ ಅನಂತಶಯನದ ಮೂಲಕ ಸ್ವರಾಜ್ಯ ಮೈದಾನಕ್ಕೆ ಶುಕ್ರವಾರ ಸಾಗಿ ಬಂತು. ಆ ಮೂಲಕ ಕೊನೆಯ ಮೂರು ದಿನಗಳ ಅದ್ದೂರಿ ಕಾರ್ಕಳ ಉತ್ಸವಕ್ಕೆ ಚಾಲನೆ ದೊರೆಯಿತು.
ಬಂಡೀಮಠದಲ್ಲಿ ಕೇಂದ್ರ ಕೃಷಿ ಸಚಿವೆ ಹಾಗೂ ಸಂಸದೆ ಶೋಭ ಕರಂದ್ಲಾಜೆ ಮೆರವಣಿಗೆಗೆ ಚಾಲನೆ ನೀಡಿದರು. ಸಚಿವ ವಿ.ಸುನಿಲ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣೀಕ್, ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಪಾಂಚ್ ಪಂಟರ್ಸ್, ಸಿಂಹ ರಾಜ, ವಿಚಿತ್ರಮಾನವ, ಶಿವ ತಾಂಡವ, ಗೂಳಿಕಟ್ಟಪ, ಆಚಿಜನೇಯ, ಮರಗಾಲು, ದಾಸಯ್ಯ, ನಂದಿಧ್ವಜ, ವೀರಭದ್ರನ ಕುಣಿತ, ಕಹಳೆ, ಪೂಜಾ ಕುಣಿತ, ಗೊರವರ ಕುಣಿತ, ಸೋಮನ ಕುಣಿತ, ಪುರವಂತಿಕೆ, ಜಗ್ಗಳಿಕೆ ಮೇಳ, ವೀರಗಾಸೆ, ಡೊಳ್ಳು ಕುಣಿತ, ಪಟದ ಕುಣಿತ, ಪುರುಷರ ನಗಾರಿ, ಮಹಿಳೆಯರ ನಗಾರಿ, ಕರಡಿ ಮಜಲು, ಕಂಸಾಲೆ, ಪೂಜಾಕುಣಿತ, ವಂಶಿಕ ಗೊಂಬೆ ಬಳಗ, ಕೇರಳದ ದೇವರ ವೇಷ, ಚಿಟ್ಟೆ ವೇಷ, ಕಾಳಿ ವೇಷ, ಹಂಸ ವೇಷ, ಪಂಚವಾದ್ಯ, ಶೃಂಗಾರಿ ಮೇಳ, ಘಟೋತ್ಕಜ, ಕಿಂಗ್ ಕಾಂಗ್, ಊರಿನ ಚೆಂಡೆ, ಕೊಂಬು, ಕಂಗೀಲು ನೃತ್ಯ, ಕೊಳಲುವಾದನ, ನಾದಸ್ವರ, ಶೃಂಗಾರಿ ಮೇಳ, ಕಥಕ್ಕಳಿ ವೇಶ, ಅಲಂಕಾರಿಕ ಕೊಡೆಗಳು, ಅರ್ಧ ನಾರೀಶ್ವರ, ಕೋಳಿಗಳು, ನವೀಲು ನೃತ್ಯ, ತಟ್ಟಿರಾಯ, ಯಕ್ಷಗಾನ ವೇಷ, ಆಳ್ವಾಸ್ ಬ್ಯಾಂಡ್ ಸೆಟ್, ಶ್ರೀಲಂಕಾದ ಮುಖವಾಡ, ಆಳ್ವಾಸ್ ಡೊಳ್ಳು ಕುಣಿತ, ತರಕಾರಿಗಳು, ಲಂಗಾ ದಾವಣಿ, ಆಳ್ವಾಸ್ ಶೃಂಗಾರಿ ಮೇಳ, ತಿರುವಾದಿರಕಳಿ , ಸಾಂತಾಕ್ಲಾಸ್, ಏಂಜಲ್ಸ್, ಕೇರಲ್ಸ್, ಎಲ್ವ್ಸ್, ಶಿಲ್ಪಾ ಬೊಂಬೆ ಬಳಗ, ಸ್ನೇಹ ಗೊಂಬೆ ಬಳಗ, ಚಿಲಿಪಿಲಿ ಗೊಂಬೆ, ಬಿದಿರೆ ಗೊಂಬೆ, ಶೆಟ್ಟಿ ಗೊಂಬೆ, ಮಂಗಳೂರು ಡೋಲು, ಕೊಂಚಾಡಿ ಚೆಂಡೆ, ಚಿತ್ರದುರ್ಗ ಬ್ಯಾಂಡ್, ಬೇಡರ ಕುಣಿತ, ಹುಲಿ ವೇಷ, ತಟ್ಟಿರಾಯ, ಹೊನ್ನಾವರ ಬ್ಯಾಂಡ್, ಕುಂದಾಪುರ ಡೋಲು, ಹಗಲು ವೇಷ, ಊಸರವಲ್ಲಿ, ಸ್ಕೇಟಿಂಗ್ ತಂಡ, ನಾಸಿಕ್ ಬ್ಯಾಂಡ್, ಕೇರಳ ವೇಷ, ತೆಯ್ಯಾಮ್, ಪೂರ್ಣಕುಂಭ, ಪ್ರಾಣಿ ಪಕ್ಷಿಗಳು, ಕೊಡಗು, ಮೈಸೂರು ಪೇಠಾಧಾರಿಗಳು, ಇಳಕಲ್ ಸೀರೆ ನಾರಿಯರು, ಲಂಬಣಿ, ಗುಜರಾತ್, ರಾಜಸ್ಥಾನ, ಪಂಜಾಬ್, ಕಾಶ್ಮೀರ, ಕೊಡಗು, ಉತ್ತರ ಕರ್ನಾಟಕ, ಕೇರಳ, ಈಶಾನ್ಯ ಭಾರತ, ಈಜಿಪ್ಟ್ ಮತ್ತು ಚೀನಾ ನಾಗರಿಕರ ವೇಷಭೂಷಣಗಳನ್ನು ಧರಿಸಿದ ಸಾವಿರಾರು ವಿದ್ಯಾರ್ಥಿಗಳು, ಮರಾಠ ಸೈನಿಕರು, ಭಾರತೀಯ ಸೈನಿಕರು, ಬ್ರಿಟೀಷ್ ಸೈನಿಕರು,ಬಾಹುಬಲಿ ಚಿತ್ರದ ಸೈನಿಕರ ವೇಷ, ಹಾಸ್ಯ ವೇಷಧಾರಿಗಳು, ಕೀಲು ಕುದುರೆ ರಾಜರಾಣಿ ಮತ್ತು ಮಂತ್ರಿ, ಭಾರತ ಪತಾಕೆ ಲಾಂಛನ, ಮಹಾತ್ಮ ಗಾಂಧೀಜಿ, ವಿವೇಕಾನಂದ, ಸುಭಾಸ್‍ಶ್ಚಂದ್ರ ಬೋಸ್, ಭಗತ್ ಸಿಂಗ್, ಬಾಲ ಗಂಗಾಧರ ತಿಲಕ್, ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದವರ ವೇಷ ಧರಿಸಿದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ಪ್ರತಿ ತಂಡಗಳಲ್ಲಿ 75 ಕಲಾವಿದರು ಭಾಗವಹಿಸಿದ್ದು, ಎನ್‍ಸಿಸಿ, ಭೂಸೇನೆ, ವಾಯುಸೇನೆ ಮತ್ತು ನೌಕದಳದ ಒಟ್ಟು 500 ವಿದ್ಯಾರ್ಥಿಗಳು, ಸ್ಕೌಟ್ಸ್ ಗೈಡ್ಸ್‍ಗಳ 300, ವಿವಿಧ ಶಾಲೆಗಳ ಬ್ಯಾಂಡ್ ಸೆಟ್ 250, ರೋವರ್ಸ್ ಹಾಗು ರೇಂಜರ್ಸ್‍ಗಳ 300 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಹತ್ತು ಸಾವಿರ ಕಲಾವಿದರು ಭಾಗವಹಿಸಿದ್ದಾರೆ.
ರಸ್ತೆಯ ಇಕ್ಕೆಲೆಗಳಲ್ಲಿ ಉತ್ಸವ ಮೆರವಣಿಗೆ ವೀಕ್ಷಿಸಲು ಅಸಂಖ್ಯಾತ ಜನರು ಪಾಲ್ಗೊಂಡರು.
ಕಾರ್ಕಳ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನದ ಉದ್ಘಾಟನೆ
ಕಾರ್ಕಳ ಉತ್ಸವ ಪ್ರಯುಕ್ತ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಕೃಷಿ ವಸ್ತು ಪ್ರದರ್ಶನ, -ಫಲಪುಷ್ಪ ಪ್ರದರ್ಶನದ ಉದ್ಘಾಟನೆಯು ಸ್ವರಾಜ್ ಮೈದಾನದ ಕಾರ್ಕಳ ಉತ್ಸವ ಕಾರ್ಯಾಲಯದ ಬಳಿ ಶುಕ್ರವಾರ ನಡೆಯಿತು.
ಸಚಿವ ವಿ. ಸುನಿಲ್ ಕುಮಾರ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಜಂಟಿಯಾಗಿ ಎರಡೂ ಪ್ರದರ್ಶನಗಳನ್ನು ಉದ್ಘಾಟಿಸಿದರು. ಫಲ ಪುಷ್ಪ ಪ್ರದರ್ಶನದಲ್ಲಿ ಸುಮಾರು 12 ಸಾವಿರ ಹೂಗಳನ್ನು ಬಳಸಿಕೊಳ್ಳಲಾಗಿದೆ. 4 ಸಾವಿರ ಹೂವಿನ ಕುಂಡಗಳಿವೆ. ಪಾರಿವಾಳ, ಆನೆ, ತೆಂಕು ಬಡಗುತಿಟ್ಟಿನ ಯಕ್ಷಗಾನ ಕಿರೀಟವನ್ನು ಹೂಗಳಲ್ಲಿ ಅಂದವಾಗಿ ಬಿಡಿಸಲಾಗಿದೆ. ಮುಂಬರುವ ಮಾ.20ರವರಗೆ ಮೂರು ದಿನಗಳ ಕಾಲ ಪ್ರದರ್ಶನ ತೆರೆದಿರುವುದು.
ಕಲ್ಲಂಗಡಿ ಹಾಗೂ ಕುಂಬಳಕಾಯಿ ಹಣ್ಣಿನಲ್ಲಿ ನಾಡಿನ ಮಹಾತ್ಮರು, ಕವಿಗಳು ಹಾಗೂ ಇಂಧನ ಸಚಿವ ವಿ.ಸುನಿಲ್ ಕುಮಾರ್ ಅವರ ಭಾವಚಿತ್ರಗಳನ್ನು ಬಿಡಿಸಲಾಗಿದೆ. ನರೇಗಾ, ಸೂಕ್ಷ್ಮನೀರಾವರಿ ಯೋಜನೆಗಳ ಪ್ರಾತ್ಯಕ್ಷಿಕೆ ಮೂಲಕ ಅನಾವರಣಗೊಳಿಸಲಾಗಿದೆ.
ವಿವಿಧ ತಳಿಯ ಹಣ್ಣುಗಳು, ಪುಷ್ಪಗಳು ಜನಾಕರ್ಷಣೆ ಪಡೆದುಕೊಂಡಿವೆ. ಕೃಷಿ ಪ್ರದರ್ಶನದಲ್ಲಿ ಕೂಡ ಕೃಷಿ ಯಂತ್ರೋಪಕರಣ, ಮಾಹಿತಿ ಪ್ರದರ್ಶನಕ್ಕೆ ಇರಿಸಲಾಗಿದೆ. ಉಡುಪಿ ಕೃಷಿ ಇಲಾಖೆ ಉಪನಿರ್ದೇಶಕ ಕೆಂಪೇಗೌಡ, ಉಡುಪಿ ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ, ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಡಿ.ವಿ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ , ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.













