ಸುಳ್ಯ: ದುರ್ಗಾದಾಸ್ ಮಲ್ಲಾರ ನಿಧನ

ಸುಳ್ಯ: ಹರಿಹರ ಪಲ್ಲತಡ್ಕ ಗ್ರಾಮದ ರಾಜಕೀಯ ಧುರೀಣ, ಮಾಜಿ ತಾಲೂಕು ಬೋರ್ಡ್ ಸದಸ್ಯ, ಮಾಜಿ ಮಂಡಲ ಪಂಚಾಯತ್ ಸದಸ್ಯ, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ, ಕೊಲ್ಲಮೊಗ್ರು ಹರಿಹರ ಸೊಸೈಟಿ ಮಾಜಿ ಅಧ್ಯಕ್ಷ, ಹರಿಹರ ಮದ್ಯಮುಕ್ತ ಹೋರಾಟ ಸಮಿತಿ ಅಧ್ಯಕ್ಷ ದುರ್ಗಾದಾಸ್ ಮಲ್ಲಾರ ಮಾ.18ರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 71 ವರ್ಷ ವಯಸ್ಸಾಗಿತ್ತು. ತೀವ್ರ ಅಸೌಖ್ಯತೆ ಉಂಟಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ನಿಧನರಾದರೆಂದು ತಿಳಿದುಬಂದಿದೆ.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story





