ತಮ್ಮನಿಂದ ಅಣ್ಣನ ಕೊಲೆ ಪ್ರಕರಣ : ಆರೋಪಿ ಬಂಧನ
ಉಡುಪಿ : ಆಸ್ತಿಯ ವಿಚಾರದಲ್ಲಿ ತಮ್ಮನೊಬ್ಬ, ಅಣ್ಣನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ೮೦ ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ಮಾ.೧೬ರ ಸಂಜೆ ೬:೩೦ರ ಸುಮಾರಿಗೆ ನಡೆದಿದೆ.
ಕಬ್ಯಾಡಿ ಕಂಬಳಕಟ್ಟ ನಿವಾಸಿ ಬಾಲಕೃಷ್ಣ ನಾಯ್ಕ (43) ಕೊಲೆಯಾದ ವ್ಯಕ್ತಿ. ಈತನನ್ನು ತಮ್ಮ ದಯಾನಂದ ತಲೆಗೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸಂಜೆ ಮನೆಯ ವಾಸ್ತವ್ಯದ ವಿಚಾರದಲ್ಲಿ ಇಬ್ಬರೊಳಗೆ ಜಗಳ ನಡೆದಿದ್ದು, ಇದೇ ದ್ವೇಷದಿಂದ ಬಳಿಕ ದಯಾನಂದನು ಮನೆಯಲ್ಲಿದ್ದ ಕತ್ತಿಯಿಂದ ಬಾಲಕೃಷ್ಣನ ತಲೆಗೆ ಕಡಿದು ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಬಾಲಕೃಷ್ಣ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರುಲಾಗಿದೆ. ಆರೋಪಿ ದಯಾನಂದನನ್ನು ಮಣಿಪಾಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story