ಗಣಿ ಭಾದಿತ ಪ್ರದೇಶಗಳ ಅಭಿವೃದ್ಧಿ ವಿಚಾರ: ಸುಪ್ರೀಂ ಕೋರ್ಟ್ ಆದೇಶ ನಿರೀಕ್ಷಿಸಲಾಗುತ್ತಿದೆ; ಸಚಿವ ಮಾಧುಸ್ವಾಮಿ

ಬೆಂಗಳೂರು, ಮಾ. 18: ‘ಗಣಿ ಭಾದಿತ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರದೇಶಗಳ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಅಭಿವೃದ್ಧಿಗೆ ಪೂರಕ ಸಮಗ್ರ ಪರಿಸರ ಯೋಜನೆ ಕೈಗೊಳ್ಳುವ ಸಂಬಂಧ ಹಣ ಬಿಡುಗಡೆ ಸರಕಾರ ವಿಶೇಷ ಆಸಕ್ತಿ ವಹಿಸಿದ್ದು ಸುಪ್ರೀಂ ಕೋರ್ಟ್ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಸೋಮಶೇಖರ ರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಸುಪ್ರೀಂ ಕೋರ್ಟ್ ಆದೇಶದಂತೆ ಗಣಿ ಪರಿಸರ ಪುನಃಶ್ಚೇತನಕ್ಕೆ ನಿಗಮ(ಕೆಎಂಇಆರ್‍ಇ)ವನ್ನು ಕಂಪೆನಿ ಕಾಯ್ದೆ 2013ರಡಿಯಲ್ಲಿ ವಿಶೇಷ ಉದ್ದೇಶಗಳ ಸಂಸ್ಥೆ ಎಂದು ಸರಕಾರ ಸ್ಥಾಪಿಸಿದೆ. ಯೋಜನೆ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ದೊರೆಯಬೇಕಿದೆ' ಎಂದು ತಿಳಿಸಿದರು.
‘ಕೋರ್ಟ್ ಆದೇಶದಂತೆ ಸಿಇಎಂಐಝಡ್ ಪ್ರಸ್ತಾವನೆಗೆ ಶೀಘ್ರ ಅನುಮೊದಲೇ ದೊರಕಿಸಲು ಅಡ್ವೋಕೇಟ್ ಜನರಲ್ ಅವರನ್ನು ಕೋರಲಾಗಿದೆ. ಖುದ್ದು ಸರಕಾರವೇ ವಿಶೇಷ ಆಸಕ್ತಿ ವಹಿಸಿದ್ದು ಹಣ ಬಿಡುಗಡೆ ಕೋರ್ಟ್‍ನಿಂದ ಅನುಮೊದನೆ ಪಡೆಯುವ ನಿಟ್ಟಿನಲ್ಲಿ ಕಾನೂನು ತಜ್ಞರ ತಂಡವನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.





