ರೆಫರಿ ತಲೆಗೆ ಬಿಯರ್ ಕಪ್ ಎಸೆದ ಪ್ರೇಕ್ಷಕ: ಫುಟ್ಬಾಲ್ ಪಂದ್ಯ ರದ್ದು

Photo: Twitter/@Sachk0
ಬರ್ಲಿನ್: ಕಿಡಿಗೇಡಿ ಪ್ರೇಕ್ಷಕನೊಬ್ಬ ಎಸೆದ ಪ್ಲಾಸ್ಟಿಕ್ ಬಿಯರ್ ಕಪ್ ವೊಂದು ಸಹಾಯಕ ರೆಫರಿ ತಲೆಗೆ ಅಪ್ಪಳಿಸಿದ ಪರಿಣಾಮವಾಗಿ ಬೊಚುಮ್ ಹಾಗೂ ಬೊರುಸ್ಸಿಯಾ ಮೊಯೆನ್ಚೆಂಗ್ಲಾಡ್ಬಾಚ್ ನಡುವಿನ ಬುಂಡೆಸ್ಲಿಗಾ ಫುಟ್ಬಾಲ್ ಪಂದ್ಯ ರದ್ದಾಗಿರುವ ಘಟನೆ ಶುಕ್ರವಾರ ನಡೆದಿದೆ.
71 ನಿಮಿಷಗಳ ಆಟದ ನಂತರ ಲೈನ್ಸ್ಮ್ಯಾನ್ ಕ್ರಿಶ್ಚಿಯನ್ ಗಿಟ್ಟೆಲ್ಮನ್ ತಲೆಗೆ ಏಟು ಬಿದ್ದಾಗ ಪಂದ್ಯವು ಸ್ಥಗಿತಗೊಂಡಿತು. ಆಗ ಬೊರುಸ್ಸಿಯಾ ಗ್ಲಾಡ್ಬಾಚ್ 2-0 ಮುನ್ನಡೆ ಸಾಧಿಸಿತ್ತು.
ಘಟನೆ ನಡೆದು 20 ನಿಮಿಷಗಳ ನಂತರ ಪಂದ್ಯವನ್ನು ನಿಲ್ಲಿಸುವ ನಿರ್ಧಾರವನ್ನು ರೆಫರಿ ತೆಗೆದುಕೊಂಡರು. ಎರಡೂ ಫುಟ್ಬಾಲ್ ಕ್ಲಬ್ಗಳು ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ಘಟನೆಯನ್ನು ಖಂಡಿಸಿದವು.
"ನಾವು ಲೈನ್ಸ್ಮ್ಯಾನ್ ಕ್ರಿಶ್ಚಿಯನ್ ಗಿಟ್ಟೆಲ್ಮನ್ಗೆ ಔಪಚಾರಿಕವಾಗಿ ಕ್ಷಮೆಯಾಚಿಸಬಹುದು. ನಮಗೆ ಇದು ಅತ್ಯಂತ ಮುಜುಗರದ ಮತ್ತು ಕಹಿ ಸಂಜೆ. ಮೂರ್ಖ ಫುಟ್ಬಾಲ್ ಅಭಿಮಾನಿಯಿಂದ ಅತ್ಯಂತ ಮೂರ್ಖ ಕೃತ್ಯವಿದು'' ಎಂದು ಬೋಚುಮ್ ಕ್ಲಬ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
"ಇಂತಹ ಘಟನೆಗಳು ಎಂದಿಗೂ ನಡೆಯಬಾರದು. ಫುಟ್ಬಾಲ್ ನ ಉತ್ತಮ ಆಟವು ಈ ರೀತಿ ಕೊನೆಗೊಂಡಾಗ ಅದು ನಿಮಗೆ ಕೋಪವನ್ನು ತರುತ್ತದೆ'' ಎಂದು ಗ್ಲಾಡ್ಬ್ಯಾಕ್ ಕ್ರೀಡಾ ನಿರ್ದೇಶಕ ರೋಲ್ಯಾಂಡ್ ವಿರ್ಕಸ್ ಹೇಳಿದ್ದಾರೆ.
Disgraceful situation at Vonovia Ruhrstadion, where the Bochum-Gladbach Bundesliga clash was abandoned after 71 minutes due to a linesman being struck on the head by an object from the crowd.#BOCBMG
— Sacha Pisani (@Sachk0) March 18, 2022
pic.twitter.com/Yfdn4R2blJ