ಬೆಳ್ತಂಗಡಿ: ದಿನೇಶ್ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ; ಕುಟುಂಬಕ್ಕೆ ಸಾಂತ್ವನ
ಬಜರಂಗದಳ ಕಾರ್ಯಕರ್ತನಿಂದ ಕೊಲೆಯಾದ ದಲಿತ ಯುವಕ

ಬೆಳ್ತಂಗಡಿ : ಬಜರಂಗದಳ ಕಾರ್ಯಕರ್ತನಿಂದ ಇತ್ತೀಚೆಗೆ ಕೊಲೆಯಾದ ಬೆಳ್ತಂಗಡಿಯ ದಲಿತ ಯುವಕ ದಿನೇಶ್ ಮನೆಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ ವೈಯಕ್ತಿಕ ಪರಿಹಾರವಾಗಿ ಒಂದು ಲಕ್ಷ ರೂ.ಗಳನ್ನು ಸಿದ್ದರಾಮಯ್ಯ ಅವರು ಕುಟುಂಬದವರಿಗೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ದಿನೇಶ್ ಹತ್ಯೆ ವಿಚಾರವನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು. ದಿನೇಶ್ ಕುಟುಂಬಕ್ಕೆ ಸರಕಾರ ಕೂಡಲೇ 25 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ಹತ್ಯೆಯಾದಾಗ ಪರಿಹಾರ ನೀಡಿದ ಸರಕಾರ ದಿನೇಶ್ ಬಗ್ಗೆ ಯಾಕೆ ತಾರತಮ್ಯ ದೋರಣೆ ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು. ಹತ್ಯೆ ಯಾರದೇ ನಡೆದರೂ ಅದು ತಪ್ಪೇ ಇಂತಹ ಘಟನೆಗಳು ನಡೆದಾಗ ಸರಕಾರ ತಾರತಮ್ಯ ನೀತಿ ಅನುಸರಿಸಬಾರದು ಎಂದು ಅವರು ಹೇಳಿದರು.
ಮಾಜಿ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರರಮಾನಾಥ ರೈ, ಐವನ್ ಡಿಸೋಜ ಹಾಗು ಇತರರು ಉಪಸ್ಥಿತರಿದ್ದರು.






.jpeg)


.jpeg)

.jpeg)

