Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ʼದೇಶ, ಸಂವಿಧಾನ, ಪ್ರಜಾಪ್ರಭುತ್ವವನ್ನು...

ʼದೇಶ, ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸಲು ಧರ್ಮ, ಭಾವನಾತ್ಮಕ ವಿಷಯಗಳ ಮೇಲೆ ರಾಜಕಾರಣ ಮಾಡುವವರ ವಿರುದ್ಧ ಹೋರಾಡಿʼ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ವಾರ್ತಾಭಾರತಿವಾರ್ತಾಭಾರತಿ19 March 2022 7:40 PM IST
share
ʼದೇಶ, ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸಲು ಧರ್ಮ, ಭಾವನಾತ್ಮಕ ವಿಷಯಗಳ ಮೇಲೆ ರಾಜಕಾರಣ ಮಾಡುವವರ ವಿರುದ್ಧ ಹೋರಾಡಿʼ

ಹಿರಿಯಡ್ಕ : ಈ ದೇಶ ಉಳಿಯಬೇಕು ಎನ್ನುವುದಾದರೆ, ಸಂವಿಧಾನ ಉಳಿಯಬೇಕು ಎನ್ನುವುದಾದರೆ, ಪ್ರಜಾಪ್ರಭುತ್ವ ಉಳಿಯಬೇಕು ಎನ್ನುವುದಾದರೆ, ಯಾರು ಧರ್ಮದ ಆಧಾರದ ಮೇಲೆ, ಭಾವನಾತ್ಮಕ ವಿಷಯಗಳ ಮೇಲೆ ರಾಜಕಾರಣ ಮಾಡುತ್ತಾರೋ ಅಂಥವರ ವಿರುದ್ಧ ಎಲ್ಲರೂ ಹೋರಾಟ ಮಾಡಲೇಬೇಕಾಗುತ್ತದೆ. ಇಲ್ಲದಿದ್ದರೆ ಈ ದೇಶ ಉಳಿಯೊಲ್ಲ, ಸಂವಿಧಾನದ ರಕ್ಷಣೆಯಾಗೊಲ್ಲ, ಪ್ರಜಾಪ್ರಭುತ್ವ ಉಳಿಯಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಯಾಗಿ 50 ವರ್ಷ ಪೂರ್ಣಗೊಂಡ ಪ್ರಯುಕ್ತ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಿರಿಯಡ್ಕದ ಗಾಂಧಿ ಮೈದಾನದ ಇಂದಿರಾಗಾಂಧಿ ವೇದಿಕೆಯಲ್ಲಿ ಇಂದು ಆಯೋಜಿಸಲಾದ  ‘ಭೂ ಸುಧಾರಣಾ ಕಾಯ್ದೆ ಸುವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ಈ ರಾಜ್ಯದಲ್ಲಿ ೧೯೭೪ರಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾದ ಭೂಮಸೂದೆ ಕಾಯ್ದೆಯನ್ನು ಈಗಿನ ಬಿಜೆಪಿ ಸರಕಾರ ನಾಶಗೊಳಿಸಿದೆ. ಕಾಂಗ್ರೆಸ್ ಸರಕಾರ ಬಡವರನ್ನು ಜಮೀನಿನ ಒಡೆಯರನ್ನಾಗಿ ಮಾಡಿದರೆ, ಅವನನ್ನು ಬಿಜೆಪಿ ಸರಕಾರ ಬಿಕ್ಷುಕನನ್ನಾಗಿ ಮಾಡಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಇಂಥವರನ್ನು ಜನತೆ ಬೆಂಬಲಿಸಬೇಕೇ ಎಂದು ಪ್ರಶ್ನಿಸಿದರು.

ಒಂದು ದೇಶ, ಒಂದು ರಾಜ್ಯ ಅಭಿವೃದ್ಧಿಯಾಗಲು ಅಲ್ಲಿ ಶಾಂತಿ, ಸುವ್ಯವಸ್ಥೆ ಇರಬೇಕು. ಜನ ನೆಮ್ಮದಿಯ ಬದುಕು ಕಾಣುವಂತಾಗಬೇಕು. ಭಾರತ ಇನ್ನೂ ಅಭಿವೃದ್ಧಿಶೀಲ ದೇಶ. ಇಲ್ಲಿ ಇನ್ನೂ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಕಾಣಲು ಸಾಧ್ಯವಾಗಿಲ್ಲ. ನಾವು ದೇಶದ ಸಂವಿಧಾನವನ್ನು ಒಪ್ಪಿಕೊಂಡು 72 ವರ್ಷಗಳಾಗಿವೆ. ಇನ್ನೂ ಜಾತ್ಯತೀತ, ಸಾಮಾಜಿಕ ಸಮಸಮಾಜದ ನಿರ್ಮಾಣ ಸಾಧ್ಯವಾಗಿಲ್ಲ ಎಂದವರು ವಿಷಾಧಿಸಿದರು.

ದೇಶದಲ್ಲಿ ಸಮಾನತೆ ತರಲು ಅವಕಾಶ ವಂಚಿತ ಜನರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟು ಅವರು ಸಹ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಕೆಳವರ್ಗದ ಜನರೂ ಸಮಾಜದ ಮುಖ್ಯವಾಹಿನಿಗೆ ಬಂದರೆ ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಭೂಮಿ ಉಳ್ಳವರ ಕೈಯಲ್ಲಿ: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇಲ್ಲಿನ ಭೂಮಿ ಹೆಚ್ಚಾಗಿ ಉಳ್ಳವರ ಕೈಯಲ್ಲಿತ್ತು. ಆದರೆ ಅವರು ಉಳಿಮೆ ಮಾಡುತ್ತಿರಲ್ಲಿಲ್ಲ. ಅಂದು ಉಳುವವನೇ ಹೊಲದೊಡೆಯ ಆಗಬೇಕೆಂದು ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿವೆ. ಶಿವಮೊಗ್ಗದಲ್ಲಿ ಶಾಂತವೇರಿ ಗೋಪಾಲ ಗೌಡರು ದೊಡ್ಡ ಹೋರಾಟವನ್ನು ಸಂಘಟಿಸಿದ್ದರು ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

೧೯೫೪ರಲ್ಲಿ ಜಮೀನ್ದಾರಿ ಪದ್ಧತಿ ರದ್ಧತಿಗಾಗಿ ಹೋರಾಟಗಳು ನಡೆದಿದ್ದವು. ಕರ್ನಾಟಕದಲ್ಲಿ ೧೯೬೫ರಲ್ಲಿ ಗೇಣಿದಾರರ ರಕ್ಷಣೆಗಾಗಿ ಕಾಯ್ದೆ ಜಾರಿಗೊಂಡಿತ್ತು.  ಈ ಕಾಯ್ದೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿಕೊಂಡು ದೇವರಾಜ ಅರಸು ಅವರ ೧೯೭೪ರಲ್ಲಿ ಭೂಸುಧಾರಣಾ ಮಸೂದೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ್ದರು. ಅಂದು ಕಂದಾಯ ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟಿ ಅವರು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರು ಎಂದು ಸಿದ್ದರಾಮಯ್ಯ ನುಡಿದರು.

೧೯೭೨ರಲ್ಲಿ ಸಿಎಂ ಆದ ದೇವರಾಜ ಅರಸು ಕಾಂಗ್ರೆಸಿಗರಾದರೂ ಸಮಾಜವಾದಿ ಚಿಂತನೆಯನ್ನು ರೂಪಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಾಧ್ಯವಾಗಿತ್ತು. ಕರಾವಳಿ ಭಾಗದಲ್ಲಿ ಸುಮಾರು ಆರು ಲಕ್ಷ ಮಂದಿ ಇದರ ಲಾಭ ಪಡೆದಿದ್ದರು. ಇಲ್ಲಿ ಮೂರ್ತೆದಾರರು, ಕಾರ್ಮಿಕರು, ಮೊಗವೀರರು ಹಾಗೂ ಇತರ ಹಿಂದುಳಿದ ಜಾತಿಯವರು ಕಾಯ್ದೆಯ ಮೂಲಕ ಭೂ ಒಡೆಯರಾದರು ಎಂದರು.

ರದ್ದುಗೊಳಿಸಿದ ಬಿಜೆಪಿ: ಭೂಸುಧಾರಣೆ ಕಾಯ್ದೆ ೧೯೭೪ರಲ್ಲಿ ೭೯ಎ, ಬಿ, ಸಿ, ಹಾಗೂ ಸೆಕ್ಷನ್‌೧೮, ಸೆಕ್ಷನ್‌೬೩ ಅತ್ಯಂತ ಪ್ರಮುಖ ಅಂಶಗಳು. ಇದರಲ್ಲಿ ಬಿಜೆಪಿ ಸರಕಾರ ಇಂದು ೭೯ಎ, ಬಿ, ಸಿಯನ್ನು ರದ್ದು ಮಾಡಿದೆ. ಇದರಿಂದ ೧೫,೦೦೦ ಮಂದಿಯ ಸುಮಾರು ೨೦,೦೦೦ಕೋಟಿ ರೂ.ಬೆಳೆಬಾಳುವ ಭೂಮಿ ಮೇಲಿನ ಕೇಸು ರದ್ದಾಗಿದೆ. ಈ ಮೂಲಕ ದೇವರಾಜ ಅರಸು ತಂದ ಕಾನೂನು ಇಂದು ‘ಉಳ್ಳವನೇ ಭೂಮಿಗೊಡೆಯ’ ಎಂಬಂತಾಗಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಹೀಗಾಗಿ ಉಳ್ಳವರ ಪರ ನಿಂತ ಸರಕಾರವನ್ನು ರಾಜ್ಯದ ಜನತೆ ಇಂದು ತಿರಸ್ಕರಿಸಬೇಕಿದೆ. ಕೇರಳ, ಪಶ್ಚಿಮ ಬಂಗಾಳ ಬಿಟ್ಟರೆ ಈ ಕಾಯ್ದೆ ಪರಿಣಾಮಕಾರಿ ಯಾಗಿ ಜಾರಿಗೊಂಡಿದ್ದೇ ಕರ್ನಾಟಕದಲ್ಲಿ. ದೇವರಾಜ ಅರಸು ಅವರ ಬಲಿಷ್ಟರ ಎಲ್ಲಾ ಒತ್ತಡಕ್ಕೂ ಬಗ್ಗದೇ, ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದರು. ಅವರು ಟ್ರಿಬ್ಯೂನಲ್‌ಗಳಿಗೂ ಜನಸಾಮಾನ್ಯರನ್ನೇ ನೇಮಿಸಿ ಬಡವರಿಗೆ ಸಹಾಯ ಮಾಡಿದ್ದರು ಎಂದರು.

ಇದೇ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆಯನ್ವಯ ಭೂಮಿಯನ್ನು ಪಡೆದು ಇಂದಿಗೂ ಕೃಷಿಕಾಯಕದಲ್ಲಿ ತೊಡಗಿರುವ ಜಿಲ್ಲೆಯ ಎಲ್ಲಾ ಬ್ಲಾಕ್‌ಗಳ ಒಟ್ಟು ೫೦ ಮಂದಿ ಕೃಷಿಕರನ್ನು ಸಿದ್ದರಾಮಯ್ಯ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಐವನ್ ಡಿಸೋಜ,ಮೊಯ್ದಿನ್ ಬಾವ,  ಕಾಂಗ್ರೆಸ್ ನಾಯಕರಾದ ದೇವಿಪ್ರಸಾದ್ ಶೆಟ್ಟಿ, ಎಂ.ಎ.ಗಫೂರ್, ಅಮೃತ ಶೆಣೈ, ಸಂತೋಷ ಕುಲಾಲ್, ನವೀನ್‌ ಸುವರ್ಣ, ಹರೀಶ್ ಕಿಣಿ ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು ಸ್ವಾಗತಿಸಿದರೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

8 ವರ್ಷಗಳಲ್ಲಿ ಮೋದಿ ಮಾಡಿದ್ದು 100 ಲಕ್ಷ ಕೋಟಿ ಸಾಲ

2014ರಲ್ಲಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಪಟ್ಟದಿಂದ ಇಳಿಯುವಾಗ ದೇಶದ ಸಾಲ ಇದ್ದಿದ್ದು ೫೩,೧೧,೦೦೦ ಕೋಟಿ ರೂ. ಇದೀಗ ೨೦೨೨-೨೩ಕ್ಕೆ ಈ ಸಾಲ ೧೫೨,೦೦,೦೦೦ ಕೋಟಿ ರೂ.ಗಳಿಗೆ ನೆಗೆದಿದೆ. ನರೇಂದ್ರ ಮೋದಿ ದೇಶ ಉದ್ಧಾರ ಮಾಡುತ್ತೇನೆ ಎಂದು ಬಂದು ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿಯಾಗಿ ಸುಮಾರು ೧೦೦ ಲಕ್ಷ ಕೋಟಿ ಸಾಲ ಮಾಡಿದಾರೆ. ನಾವು ಇನ್ನೂ ಸುಮ್ಮನೇ ಕುಳಿತುಕೊಳ್ಳಬೇಕೇ ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಪೆಟ್ರೋಲ್, ಡೀಸೆಲ್, ಅನಿಲದ ಬೆಲೆ ಏನಾಯಿತು ಎಂದು ಕೇಳಿದರು.

ಇನ್ನು ೨೦೧೮-೧೯ನೇ ಸಾಲಿನಲ್ಲಿ ಕರ್ನಾಟಕದ ಒಟ್ಟು ಸಾಲ ೨.೪೨ ಲಕ್ಷ ಕೋಟಿ ರೂ.ಗಳಾದರೆ, ಇಂದು ೨೦೨೨-೨೩ಕ್ಕೆ ೫.೧೮ಲಕ್ಷ ಕೋಟಿ ರೂ.ಸಾಲ ರಾಜ್ಯದ ಮೇಲಿದೆ. ಇದರ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದರು.

ನೋಟು ರದ್ಧತಿಯಿಂದಾಗಿ ಕರ್ನಾಟಕದ ಸಣ್ಣ ಮತ್ತು ಅತಿಸಣ್ಣ ಕೈಗಾರಿಕಾ ವಲಯದಲ್ಲಿದ್ದ ಉದ್ಯೋಗಿಗಳ ಸಂಖ್ಯೆ ೧೧ಕೋಟಿಯಲ್ಲಿ ಶೇ.೬೦ರಷ್ಟು ಘಟಕ ಮುಚ್ಚಿರುವುದರಿಂದ ಇಂದು ಉದ್ಯೋಗದಲ್ಲಿರುವವರ ಸಂಖ್ಯೆ ೨.೫೦ ಕೋಟಿ ಮಾತ್ರ ಎಂದವರು ವಿವರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X