ಯುವತಿಗೆ ಕಿರುಕುಳ : ಆರೋಪಿ ಸೆರೆ
ಮಂಗಳೂರು : ಯುವತಿಗೆ ಬಸ್ಸಿನಲ್ಲಿ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಯುವಕನನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹಾವೇರಿಯ ವಾಜಿದ್ ಜಮಖಾನಿ ಎಂದು ಗುರುತಿಸಲಾಗಿದೆ.
ಸುಳ್ಯದಿಂದ ಮಂಗಳೂರಿಗೆ ಆಗಮಿಸುವ ಸರಕಾರಿ ಬಸ್ಸಿನಲ್ಲಿ ಬರುತ್ತಿದ್ದ ಯುವತಿಯ ಪಕ್ಕದಲ್ಲಿ ಕುಳಿತ ಯುವಕನು ಅಸಭ್ಯವಾಗಿ ವರ್ತಿಸಿದ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಿದ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
Next Story