ಮಾ.20: ಅರಸ್ತಾನ ಉರೂಸ್ ಸಮಾರೋಪ
ಮಂಗಳೂರು : ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅಲ್-ಮುಬಾರಕ್ ಜುಮಾ ಮಸ್ಜಿದ್ ಹಾಗೂ ಅರ್ರಿಫಾಯಿಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್ (ರಿ)ನ ಆಶ್ರಯದಲ್ಲಿ ನಡೆಯುವ ಅರಸ್ಥಾನ ದರ್ಗಾ ಉರೂಸ್‌ನ ಸಮಾರೋಪವು ಮಾ.20ರಂದು ನಡೆಯಲಿದೆ.
ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಳ್ ಮಲಪ್ಪುರಂ ದುಆ ಹಾಗೂ ಅಶ್ಛಾಖ್ ಫೈಝಿ ನಂದಾವರ ಮತಪ್ರವಚನ ನೀಡಲಿದ್ದಾರೆ. ಅತಿಥಿಗಳಾಗಿ ರಾಜ್ಯ ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ ಖಾದರ್, ಅಲ್-ಮುಬಾರಕ್ ಜುಮಾ ಮಸ್ಜಿದ್‌ಮ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು ಮತ್ತು ಹಂಝ ಮಲಾರ್, ಗ್ರಾಪಂ ಉಪಾಧ್ಯಕ್ಷ ಅನ್ಸಾರ್ ಇನೋಳಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





