ಹೈದರಾಬಾದ್: ಬಿಜೆಪಿ ಶಾಸಕ ರಾಜಾ ಸಿಂಗ್ ಪೊಲೀಸ್ ವಶಕ್ಕೆ

ರಾಜಾ ಸಿಂಗ್ (PTI)
ಹೈದರಾಬಾದ್: ಗೋಶಾಮಹಲ್ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರನ್ನು ಶನಿವಾರ ಅಲ್ವಾಲ್ನಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು telanganatoday.com ವರದಿ ಮಾಡಿದೆ.
ಶುಕ್ರವಾರ ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯ ಯಲ್ಲರೆಡ್ಡಿಪೇಟೆಯಲ್ಲಿ ಬಿಜೆಪಿ ಮತ್ತು ಟಿಆರ್ಎಸ್ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಶಾಸಕ ರಾಜಾ ಸಿಂಗ್ ತೆರಳುತ್ತಿದ್ದಾಗ, ಅಲ್ವಾಲ್ನಲ್ಲಿ ಪೊಲೀಸರು ಅವರ ಬೆಂಗಾವಲು ಪಡೆಯನ್ನು ತಡೆದರು ಎಂದು ವರದಿಯಾಗಿದೆ.
ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದು ಅಲ್ವಾಲ್ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಬಳಿಕ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
Next Story





