Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಕಾಶ್ಮೀರ್ ಫೆೈಲ್’: ಬುದ್ಧಿಗೇಡಿಗಳ...

‘ಕಾಶ್ಮೀರ್ ಫೆೈಲ್’: ಬುದ್ಧಿಗೇಡಿಗಳ ಬೌದ್ಧಿಕ ದಿವಾಳಿತನ

ಎನ್. ಜಗದೀಶ್ ಕೊಪ್ಪಎನ್. ಜಗದೀಶ್ ಕೊಪ್ಪ20 March 2022 12:05 AM IST
share
‘ಕಾಶ್ಮೀರ್ ಫೆೈಲ್’:  ಬುದ್ಧಿಗೇಡಿಗಳ ಬೌದ್ಧಿಕ ದಿವಾಳಿತನ

ಕಾಶ್ಮೀರದ ಪಂಡಿತ ಸಮುದಾಯದ ರಾಹುಲ ಪಂಡಿತ ಎಂಬ ಯುವ ಪತ್ರಕರ್ತ (ಹಿಂದೂ ಪತ್ರಿಕೆಯ ವರದಿಗಾರನಾಗಿದ್ದ) ಬರೆದ ‘ಅವರ್ ಮೂನ್ ಹ್ಯಾವ್ಸ್ ಬ್ಲಡ್ ಕ್ಲಾಟ್ಸ್’ (ನಮ್ಮ ಚಂದ್ರಮನಲ್ಲಿ ಹೆಪ್ಪುಗಟ್ಟಿದ ರಕ್ತವಿದೆ) ಎಂಬ ನೆನಪಿನ ಕೃತಿ 2013ರಲ್ಲಿ ಪ್ರಕಟವಾಗಿ ನನ್ನನ್ನು ಬಹುವಾಗಿ ಕಾಡಿತ್ತು. ಕಾಶ್ಮೀರದಲ್ಲಿ ತಾನು ಕಳೆದ ಬಾಲ್ಯ ಹಾಗೂ ಅಲ್ಲಿನ ಕಾಶ್ಮೀರಿ ಪ್ರತ್ಯೇಕವಾದಿಗಳಿಂದ ಪಂಡಿತ ಸಮುದಾಯ ಅನುಭವಿಸಿದ ನೋವು, ಹುಟ್ಟಿದ ನಾಡಿನಲ್ಲಿ ಅನಾಥರಂತೆ ಬದುಕಿದ ಪರಿ, ಅಂತಿಮವಾಗಿ ದಿಲ್ಲಿಗೆ ವಲಸೆ ಬಂದು ಸರಕಾರದ ಆಶ್ರಯದಲ್ಲಿ ನಿರಾಶ್ರಿತರಂತೆ ಜೀವಿಸುತ್ತಾ ಬದುಕು ಕಟ್ಟಿಕೊಂಡ ವೈಖರಿಯನ್ನು ಯಾವುದೇ ರಾಗದ್ವೇಷವಿಲ್ಲದೆ ನಿರ್ಭಾವುಕತೆಯಿಂದ ಕೃತಿಯಲ್ಲಿ ರಾಹುಲ ಪಂಡಿತ ಕಟ್ಟಿಕೊಟ್ಟಿದ್ದಾನೆ.

ಮತ್ತೊಂದು ಕೃತಿ ಶ್ರೀನಗರದ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕನಾಗಿರುವ ಶಹನಾಝ್ ಬಶೀರ್ ಎಂಬ ಯುವಕ ಬರೆದ ನೈಜಕಥೆಯಾಧಾರಿತ ಸಣ್ಣ ಕಥೆಗಳ ಕೃತಿ ‘ಸ್ಕಾಟ್ಟರ್ಡ್ ಸೋಲ್ಸ್’ (ಚದುರಿದ ಆತ್ಮಗಳು). ಈ ಕಥೆಗಳಲ್ಲಿ ಲೇಖಕ ತನ್ನ ಬಾಲ್ಯದ ಸಹಪಾಠಿಗಳು ಮಿಲಿಟರಿ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದು, ಮಾಜಿ ಉಗ್ರವಾದಿಯ ಪತ್ನಿಯೊಬ್ಬಳ ಕಥೆ, ಊರಿನಲ್ಲಿರುವ ಪಂಡಿತರ ರಕ್ಷಣೆಗೆ ನಿಂತ ಮುಸ್ಲಿಮ್ ವೃದ್ಧನೊಬ್ಬ ಕಾಶ್ಮೀರಿ ಉಗ್ರರಿಂದ ಹತ್ಯೆಯಾಗುವ ಕಥನ ಹೀಗೆ ಅಲ್ಲಿನ ಮುಸ್ಲಿಮರು ಒಂದು ಕಡೆ ಸೇನೆ, ಮತ್ತೊಂದು ಕಡೆ ಕಾಶ್ಮೀರಿ ಉಗ್ರರು ಇವರ ನಡುವೆ ಸಿಲುಕಿ ಹೈರಾಣಾಗಿರುವ ಕಥನವನ್ನು 2016ರಲ್ಲಿ ಕೃತಿ ಮೂಲಕ ಮನೋಜ್ಞವಾಗಿ ನಿರೂಪಿಸಿದ್ದಾನೆ.

ಈ ಎರಡೂ ಕೃತಿಗಳ ಬಗ್ಗೆ ನಾನು ಹಿಂದೆ ಫೇಸ್‌ಬುಕ್‌ನಲ್ಲಿ ಹಾಗೂ ನನ್ನ ಬ್ಲಾಗ್‌ನಲ್ಲಿ ವಿವರವಾಗಿ ಬರೆದಿದ್ದೆ. ಮೆಮೋರಿ ಹೆಸರಿನಲ್ಲಿ ಫೇಸ್ ಬುಕ್ ಪ್ರತಿ ವರ್ಷ ಇವುಗಳನ್ನು ನನ್ನ ಮುಂದೆ ತಂದು ನೆನಪಿಸಿದರೂ ಕೂಡ ನಾನು ಅವುಗಳನ್ನು ಹಂಚಿಕೊಳ್ಳುವುದಿಲ್ಲ. ಅವುಗಳನ್ನು ಪ್ರತಿವರ್ಷ ಹಂಚಿಕೊಂಡು ನಿಮ್ಮನ್ನು ಅತ್ಯಾಚಾರ ಮಾಡಲು ನನಗೆ ಮನಸ್ಸಿಲ್ಲ.

ಹಿಂದಿ ಸಿನೆಮಾ ರಂಗದ ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾದ ವಿದು ವಿನೋದ್ ಚೋಪ್ರಾ ನಿಜಕ್ಕೂ ಪ್ರತಿಭಾವಂತ. ‘ಫರಿಂದಾ’, ‘ಮುನ್ನಾಬಾಯಿ ಎಂ.ಬಿ.ಬಿ.ಎಸ್.’ ‘ಲಗೆ ರಹೋ ಮುನ್ನಾಬಾಯಿ’ಯಂತಹ ಸಿನೆಮಾ ತೆಗೆದ ವಿನೋದ್ ಚೋಪ್ರಾ ಕಳೆದ ಎರಡು ವರ್ಷಗಳ ಹಿಂದೆ ‘ಶಿಕಾರ’ ಎಂಬ ಹಿಂದಿ ಚಿತ್ರವನ್ನು ಕಾಶ್ಮೀರಿ ಪಂಡಿತರ ಕಥೆಯನ್ನು ಆಧರಿಸಿ ನಿರ್ಮಿಸಿದ್ದರು. ಇದಕ್ಕೊಂದು ಕಾರಣವೂ ಇತ್ತು. 1989ರಲ್ಲಿ ಕಾಶ್ಮೀರದಿಂದ ಮುಂಬೈ ನಗರಕ್ಕೆ ವಲಸೆ ಬಂದ ಪಂಡಿತ ಸಮುದಾಯದ ಹೆಣ್ಣುಮಗಳು ಮೂವತ್ತು ವರ್ಷಗಳ ನಂತರ ಶ್ರೀನಗರಕ್ಕೆ ಹೋಗಿ ತಾನು ಬೆಳೆದ ಪರಿಸರದಲ್ಲಿ ಓಡಾಡಿ, ಅಲ್ಲಿನ ಮುಸ್ಲಿಮ್ ಸಮುದಾಯದ ಗೆಳತಿಯರೂ ಸೇರಿದಂತೆ ಎಲ್ಲರನ್ನು ಭೇಟಿ ಮಾಡಿ ಬಂದಾಗ, ಇಡೀ ಘಟನಾವಳಿಗಳನ್ನು ವಿನೋದ್ ಚೋಪ್ರಾ ಚಿತ್ರಿಸಿಕೊಂಡಿದ್ದರು. (ಆ ಹೆಣ್ಣು ಮಗಳು ವಿನೋದ್ ಚೋಪ್ರಾ ಕುಟುಂಬದ ಸ್ನೇಹಿತೆ) ಇದರಿಂದ ಪ್ರಭಾವಿತರಾಗಿ ‘ಶಿಕಾರ’ ಎಂಬ ಸಿನೆಮಾವನ್ನು ಅತ್ಯಂತ ವಸ್ತುನಿಷ್ಠವಾಗಿ ನಿರ್ಮಾಣ ಮಾಡಿದ್ದರು. ಆಶ್ಚರ್ಯವೆಂದರೆ ಈ ಸಿನೆಮಾ ಬಗ್ಗೆ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ಪ್ರತಿಭಟಿಸಿದ್ದರು.

ಈಗ ಸುಳ್ಳು ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು ಮತ್ತು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ‘ಕಾಶ್ಮೀರ್ ಫೈಲ್’ ಎಂಬ ಸಿನೆಮಾ ತೆಗೆದಿರುವ ವಿವೇಕ್ ಅಗ್ನಿಹೋತ್ರಿ ಎಂಬ ಅವಿವೇಕಿ ಹಾಗೂ ಸಂಘಪರಿವಾರದ ಸೇವಕನಿಗೆ ವಾಸ್ತವ ಬದುಕಿನ ಚಿತ್ರಣಕ್ಕಿಂತ ಸಂಘಪರಿವಾರವನ್ನು ಮೆಚ್ಚಿಸಿ ಹಣ ಮಾಡುವುದು ಮುಖ್ಯವಾದಂತೆ ಕಾಣುತ್ತಿದೆ. 1990ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಂದ ಮೃತರಾದವರಲ್ಲಿ ಕೇವಲ ಪಂಡಿತರು ಮಾತ್ರ ಸೇರಿಲ್ಲ. ಗುಜ್ಜರ್ ಎಂಬ ಕುರಿಕಾಯುವ ಸಮುದಾಯದವರು ತಮ್ಮ ಬದುಕನ್ನು ಕಳೆದುಕೊಂಡಿದ್ದಾರೆ. ಹದಿಮೂರು ಸಾವಿರ ಮುಸ್ಲಿಮ್ ಸಮುದಾಯದ ಜನ ಹತರಾಗಿದ್ದಾರೆ. ಇಂತಹ ಸತ್ಯಗಳನ್ನು ಮರೆಮಾಚಿ ಮೂರನೇ ದರ್ಜೆಯ ಸಿನೆಮಾ ತೆಗೆಯುವ ಮತ್ತು ಕೃತಿ ರಚಿಸುವ ಹಲಾಲುಕೋರರು ಈಗ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಹುಟ್ಟಿಕೊಂಡಿದ್ದಾರೆ.

ಕಾಶ್ಮೀರ್ ಫೈಲ್ ಚಿತ್ರ ಕುರಿತಾಗಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ ಮೂಲತಃ ಕಾಶ್ಮೀರಿ ಪಂಡಿತನಾದ ಲೇಖಕ ರಾಹುಲ ಪಂಡಿತನನ್ನು ಈ ನಿರ್ದೇಶಕ ರಾಹುಲ ಪಂಡಿತ ಎಡಪಂಥೀಯ ಲೇಖಕ ಎಂದು ದೂರಿದ್ದಾನೆ. ಸತ್ಯ ಹೇಳುವವರೆಲ್ಲಾ ಇಂತಹ ಅಯೋಗ್ಯರಿಗೆ ಎಡಪಂಥೀಯರಾಗಿ ಕಾಣುವುದು ನಿಜಕ್ಕೂ ಸೋಜಿಗದ ಸಂಗತಿ. ಯಾವುದೇ ಒಂದು ಘಟನೆ ಅಥವಾ ಇತಿಹಾಸವನ್ನು ವಿಶ್ಲೇಷಿಸುವಾಗ ಎಲ್ಲಾ ಆಯಾಮಗಳಿಂದ ನೋಡುವುದು ಪ್ರತಿಯೊಬ್ಬ ಲೇಖಕನ ಮತ್ತು ನಿರ್ದೇಶಕನ ನೈತಿಕ ಕರ್ತವ್ಯ.
2013ರಲ್ಲಿ ನನಗೆ ಪ್ರಥಮ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ಭಾರತದ ನಕ್ಸಲಿಯರ ಇತಿಹಾಸದ ‘ಎಂದೂ ಮುಗಿಯದ ಯುದ್ಧ’ ಕೃತಿಯ ಒಂದು ಅಧ್ಯಾಯದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವ ಅಂಶಗಳಲ್ಲಿ ಬಡತನವೂ ಒಂದು ಎಂದು ಪ್ರತಿಪಾದಿಸಿದ್ದೆ. ಇದಕ್ಕೆ ಕಾಶ್ಮೀರದ ಮುಸ್ಲಿಮರ ಬದುಕನ್ನು ಉದಾಹರಣೆಯಾಗಿ ನೀಡಿದ್ದೆ.

ಕಾಶ್ಮೀರದ ಬಡ ಮುಸ್ಲಿಮ್ ಕುಟುಂಬಗಳಲ್ಲಿ ಬೆಳೆದ ಹೆಣ್ಣು ಮಕ್ಕಳ ವಿವಾಹಕ್ಕಾಗಿ ಯುವಕರು ಕೇವಲ ಮೂರು ಲಕ್ಷ ರೂಪಾಯಿ ಹಣದ ಆಸೆಗಾಗಿ ಪಾಕ್ ಉಗ್ರಗಾಮಿಗಳ ನೆಲೆಗೆ ತೆರಳಿ ಪ್ರತ್ಯೇಕವಾದಿಗಳಾಗಿ ಪರಿವರ್ತನೆಗೊಂಡು ಅಂತಿಮವಾಗಿ ಭಾರತದ ಸೈನಿಕರಿಗೆ ಬಲಿಯಾಗುತ್ತಿರುವ ಘಟನೆಯನ್ನು ವಿವರಿಸಿದ್ದೆ. ಪಾಕ್ ಉಗ್ರರ ಚಟುವಟಿಕೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಯುವಕರು ಉಗ್ರರಾಗಿ ತರಬೇತಿ ಪಡೆಯಲು ಒಪ್ಪಿದ ಕೂಡಲೇ ಅವರ ಕುಟುಂಬಕ್ಕೆ ಮೂರು ಲಕ್ಷ ನೀಡಲಾಗುತ್ತಿತ್ತು. ಅಕಸ್ಮಾತ್ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಸುನೀಗಿದರೆ, ಇನ್ಶೂರೆನ್ಸ್ ಕಂಪನಿ ಮಾದರಿಯಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಗಳು ಮೃತನ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ನೀಡುತ್ತಿದ್ದವು. ಇಂತಹ ಪ್ರಲೋಭನೆ ಅನೇಕ ಬಡಕುಟುಂಬದ ಯುವಕರ ಭವಿಷ್ಯವನ್ನು ಹಾಳುಮಾಡಿತ್ತು. ಇದನ್ನು ನಾನು ಕೃತಿಯಲ್ಲಿ ದಾಖಲಿಸಿದ್ದೆ. ದೃಶ್ಯಮಾಧ್ಯಮ ಅಥವಾ ಕೃತಿ ಮೂಲಕ ಘಟನೆಯನ್ನು ಕಟ್ಟಿಕೊಡುವಾಗ ಅಥವಾ ನಿರೂಪಿಸುವಾಗ ಇಂತಹ ಎಚ್ಚರಿಕೆ ಎಲ್ಲರಿಗೂ ಅತ್ಯಗತ್ಯ. ಇತಿಹಾಸದ ಜರಡಿಯಲ್ಲಿ ಅಂತಿಮವಾಗಿ ಉಳಿದುಕೊಳ್ಳುವುದು ಗಟ್ಟಿ ಕಾಳುಗಳೇ ಹೊರತು ಜೊಳ್ಳು ಅಥವಾ ಕಲ್ಲು ಮಣ್ಣು ಉಳಿಯುವುದಿಲ್ಲ. ಈ ಕಟುವಾಸ್ತವ ಸತ್ಯವು ಸುಳ್ಳುಗಳನ್ನು ಪೋಷಿಸುವ ಅಯೋಗ್ಯರಿಗೆ ಈಗ ಅರ್ಥವಾಗಬೇಕಿದೆ.

share
ಎನ್. ಜಗದೀಶ್ ಕೊಪ್ಪ
ಎನ್. ಜಗದೀಶ್ ಕೊಪ್ಪ
Next Story
X