ಕೇರಳ ಫುಟ್ಬಾಲ್ ಪಂದ್ಯದ ವೇಳೆ ತಾತ್ಕಾಲಿಕ ಪ್ರೇಕ್ಷಕರ ಗ್ಯಾಲರಿ ಹಠಾತ್ ಕುಸಿತ: 200 ಕ್ಕೂ ಹೆಚ್ಚು ಮಂದಿ ಗಾಯ

Screengrab
ಮಲಪ್ಪುರಂ (ಕೇರಳ): ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಶನಿವಾರ ಫುಟ್ಬಾಲ್ ಪಂದ್ಯ ಆರಂಭವಾಗುವ ಮುನ್ನ ತಾತ್ಕಾಲಿಕ ಪ್ರೇಕ್ಷಕರ ಗ್ಯಾಲರಿ ಹಠಾತ್ ಕುಸಿದು ಇನ್ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಫುಟ್ಬಾಲ್ ಪಂದ್ಯದ ವೇಳೆ ತಾತ್ಕಾಲಿಕ ಪ್ರೇಕ್ಷಕರ ಸ್ಟ್ಯಾಂಡ್ ಕುಸಿದು ಇನ್ನೂರು ಮಂದಿ ಗಾಯಗೊಂಡರು ಹಾಗೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಪೂಂಗೋಡ್ ಸ್ಟೇಡಿಯಂ ಮಲಪ್ಪುರಂನಲ್ಲಿ ಪಂದ್ಯ ಆರಂಭವಾಗುವ ವೇಳೆ ಈ ಘಟನೆ ನಡೆದಿದೆ. ದೃಶ್ಯಾವಳಿಗಳ ಪ್ರಕಾರ, ಘಟನೆಯ ನಂತರ ಸಂಘಟಕರು ಹಾಗೂ ಇತರರು ಸ್ಥಳಕ್ಕೆ ಧಾವಿಸಿದರು. ಜನರು ಗಾಬರಿಯಿಂದ ಓಡುತ್ತಿರುವ ದೃಶ್ಯವೂ ಕಂಡುಬಂತು.
ಕೇರಳದ ಉತ್ತರ ಜಿಲ್ಲೆಯಲ್ಲಿ ಪ್ರಾದೇಶಿಕ ಫುಟ್ಬಾಲ್ ಪಂದ್ಯಾವಳಿಗಳು ಸಾಕಷ್ಟು ಜನಪ್ರಿಯವಾಗಿವೆ ಹಾಗೂ ಈ ಪಂದ್ಯವು ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸಿದೆ.
#WATCH Temporary gallery collapsed during a football match in Poongod at Malappuram yesterday; Police say around 200 people suffered injuries including five with serious injuries#Kerala pic.twitter.com/MPlTMPFqxV
— ANI (@ANI) March 20, 2022