ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ಉದ್ಘಾಟನೆ
![ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ಉದ್ಘಾಟನೆ ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ಉದ್ಘಾಟನೆ](https://www.varthabharati.in/sites/default/files/images/articles/2022/03/20/328754-1647776572.jpeg)
ಉಡುಪಿ : ನಾಟಕ ಕಲಾವಿದರ ಸಮಸ್ಯೆಗಳ ಪರಿಹಾರ ಮತ್ತು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಕಲಾವಿದರು ತೊಡಗಿಕೊಳ್ಳುವ ನಿಟ್ಟಿನಲ್ಲಿ ರಚಿಸಲಾದ ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ರವಿವಾರ ಬೀಡಿನಗುಡ್ಡೆ ದೇವಾಡಿಗರ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.
ಒಕ್ಕೂಟವನ್ನು ಉದ್ಘಾಟಿಸಿದ ಸಿನಿಮಾ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಮಾತನಾಡಿ, ಈವರೆಗೆ ಕಲಾವಿದರಿಗೆ ತಮ್ಮನ್ನು ಕೇಳುವವರಿಲ್ಲ ಎಂಬ ಭಾವನೆ ಇತ್ತು. ಇದೀಗ ಅದನ್ನು ತೊಡೆದು ನಮಗೂ ಒಂದು ಸಂಘಟನೆ ಇದೆ ಎಂಬುದನ್ನು ಎದೆತಟ್ಟಿ ಹೇಳುವಂತಾಗಿದೆ ಎಂದು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹರಿಪ್ರಸಾದ್ ನಂದಳಿಕೆ, ಸುಜಿತ್ ನಿಟ್ಟೆ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್.ಪಿ., ಕೊಂಕಣಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಿನೇಶ್ ಕಲ್ಲೊಟ್ಟೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಕೆ.ಕೆ.ಸಾಲಿಯಾನ್, ಗೋಪಿನಾಥ್ ಭಟ್ ಹಳೆಯಂಗಡಿ, ಪ್ರಭಾಕರ ಕಲ್ಯಾಣಿ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷ ಲೀಲಾಧರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸನ್ನ ಶೆಟ್ಟಿ ಬೈಲೂರು ಕಾರ್ಯಕ್ರಮ ನಿರೂಪಿಸಿದರು.