ಬೈಂದೂರಿನಲ್ಲಿ ಮಹಿಳಾ ಕಾರ್ಮಿಕರ ಸಮಾವೇಶ

ಬೈಂದೂರು : ಬೈಂದೂರ ತಾಲೂಕು ಕಾರ್ಮಿಕ ಮಹಿಳಾ ಉಪ ಸಮಿತಿಯ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕಾರ್ಮಿಕರ ಸಮಾವೇಶವು ರವಿವಾರ ಬೈಂದೂರು ಬಂಕೇಶ್ವರದ ಮಹಾಕಾಳಿ ದೇವಸ್ಥಾನ ಸಭಾಂಗಣದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಾಗರತ್ನ ಹೇರಳೆ ಗಿಳಿಯಾರು ಮಹಿಳೆಯರ ಮೇಲೆ ನಡೆಯುವ ಶೋಷಣೆ, ದೌರ್ಜನ್ಯದ ಕುರಿತು ಮಾತನಾಡಿ ದರು. ಮುಖಂಡರಾದ ನಾಗರತ್ನ ಪಡುವರಿ, ಲಲಿತ, ಕಾರ್ಮಿಕ ಮುಖಂಡ ರಾದ ಗಣೇಶ ತೊಂಡೆಮಕ್ಕಿ, ವೆಂಕಟೇಶ ಕೋಣಿ, ಶ್ರೀನಿವಾಸ ಉಪ್ಪುಂದ ಮೊದ ಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಾಕಾಳಿ ದೇವಸ್ಥಾನದ ಮುಖ್ಯಸ್ಥೆ ಚಿತ್ರ ಅವರನ್ನು ಅಭಿನಂದಿಸಲಾಯಿತು. ಜಯಂತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





