ಮತ್ತೊಮ್ಮೆ ಮಣಿಪುರ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಎನ್. ಬೀರೇನ್ ಸಿಂಗ್

ಇಂಫಾಲ,ಮಾ.20: ಸತತ ದ್ವಿತೀಯ ಅವಧಿಗೆ ಮಣಿಪುರದ ಮುಖ್ಯಮಂತ್ರಿಯಾಗಿ ಎನ್.ಬಿರೇನ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆಯೆಂದು ಬಿಜೆಪಿ ರವಿವಾರ ಪ್ರಕಟಿಸಿದೆ.
ಇಂಫಾಲದಲ್ಲಿ ರವಿವಾರ ನಡೆದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಣಿಪುರದ ಮುಖ್ಯಮಂತ್ರಿಯಾಗಿ ಎನ್.ಬಿರೇನ್ ಸಿಂಗ್ ಅವರ ಆಯ್ಕೆಯನ್ನು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಬಿರೇನ್ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ನಿರ್ಧಾರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತೆಂದು ಸೀತಾರಾಮನ್ ತಿಳಿಸಿದರು. ಈ ನಿರ್ಧಾರವು ಮಣಿಪುರದಲ್ಲಿ ಸ್ಥಿರವಾದ ಸರಕಾರ ಒದಗಿಸುವ ನಿಟ್ಟಿನಲ್ಲಿ ಸುದೀರ್ಘವಾದ ಹಾದಿಯನ್ನು ಕ್ರಮಿಸಿದಂತಾಗಿದೆ ಎಂದರು.
60 ಸದಸ್ಯ ಬಲದ ಮಣಿಪುರ ವಿಧಾನಸಭಾ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಿದ್ದು ಬಿಜೆಪಿ 32 ಕ್ಷೇತ್ರಗಳಲ್ಲಿ ವಿಜಯಗಳಿಸಿತ್ತು. ಬಿರೇನ್ ಸಿಂಗ್ ಅವರು ಹೈನ್‌ಗಾಂಗ್ ವಿಧಾನಸಭಾ ಕ್ಷೇತ್ರದಿಂದ 18,271 ಮತಗಳಿಂದ ವಿಜಯಗಳಿಸಿತ್ತು. 2017ರ ವಿಧಾನಸಭಾ ಚುನಾವಣೆಗಿಂತ ಈ ಸಲ ಬಿಜೆಪಿಯ ನಿರ್ವಹಣೆಯ ಉತ್ತಮವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅದು ಕೇವಲ 21 ಸ್ಥಾನಗಳಲ್ಲಿ ಜಯಗಳಿಸಿದೆ.





