ಫುರ್ಖಾನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ದೇರಳಕಟ್ಟೆ ವತಿಯಿಂದ ಯುಟಿ ಖಾದರ್ ಗೆ ಸನ್ಮಾನ

ಮಂಗಳೂರು: ಫುರ್ಖಾನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ದೇರಳಕಟ್ಟೆ ಇದರ ಆಶ್ರಯದಲ್ಲಿ ವಿರೋಧ ಪಕ್ಷದ ಉಪ ನಾಯಕ ಯುಟಿ ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ದೇರಳಕಟ್ಟೆಯಲ್ಲಿ ರವಿವಾರ ನಡೆಯಿತು.
ಉದ್ಯಮಿ ಮೊಯ್ದಿನಬ್ಬ ಸುರತ್ಕಲ್ ಹಾಗೂ ಮುಹಮ್ಮದ್ ನಡುಪದವು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭ ಮದನಿ ಅರಬಿಕ್ ಕಾಲೇಜ್ ಪ್ರಿನ್ಸಿಪಾಲ್ ಉಸ್ಮಾನ್ ಫೈಝಿ ತೋಡಾರ್, ಸಮಸ್ತ ವಿದ್ಯಾಬ್ಯಾಸ ಬೋರ್ಡ್ ಸದಸ್ಯ ರಶೀದ್ ಹಾಜಿ ಪರ್ಲಡ್ಕ , ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎಂ. ಸತ್ತಾರ್, ಎಸ್ಕೆ ಎಸ್ ಎಸ್ ಎಫ್ ದೇರಳಕಟ್ಟೆ ವಲಯ ಕಾರ್ಯದರ್ಶಿ ನೌಶಾದ್ ದೇರಳಕಟ್ಟೆ , ಮುಸ್ತಫಾ ಫೈಝಿ, ಕಿನ್ಯ ಗ್ರಾ.ಪಂ ಸದಸ್ಯ ರಾದ ಫಾರೂಕ್ ಕಿನ್ಯ, ಸಿರಾಜ್ ಕಿನ್ಯ, ಅಬ್ಬು ಕಿನ್ಯ, ಬದ್ರುದ್ದೀನ್ ತೈದೋಟ, ರವೂಫ್ ದೇರಳಕಟ್ಟೆ, ಅಸ್ಗರ್ ಮುಡಿಪು, ಪಝಲ್ ಅಸೈಗೋಳಿ ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ರಹ್ಮಾನ್ ತಬೂಕು ದಾರಿಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.