ಬೆಂಗಳೂರು: ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ; ಮೂವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ (Credit - PTI)
ಬೆಂಗಳೂರು, ಮಾ. 20: ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಸಂಬಂಧ ನಂದಿನಿಲೇಔಟ್ ಠಾಣಾ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೊಳಡಿಸಿದ್ದಾರೆ.
ರಮೇಶ್, ಸ್ವಾತಿ ಹಾಗೂ ಯೋಗೇಶ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ನಂದಿನಿ ಲೇಔಟ್ನ ಗಣೇಶ ಬ್ಲಾಕ್ನಲ್ಲಿ ವಾಸವಾಗಿರುವ ಕಲಾವಿದೆ ದೇವಿ ಅವರು ಈ ಹಿಂದೆ ಬಿಎಂಟಿಸಿಯಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯ ಕಾರಣಕ್ಕಾಗಿ ಹುದ್ದೆಯನ್ನು ತ್ಯಜಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ನಟಿಯಾಗಿ ತೊಡಗಿಸಿಕೊಂಡಿದ್ದರು.
ಮಾ.18ರಂದು ಮನೆಯ ಮುಂದಿನ ಜಗಲಿಯಲ್ಲಿ ಮಲಗಿದ್ದ ದೇವಿಯನ್ನು ಗುರಿಯಾಗಿಸಿಕೊಂಡು ಪರಿಚಯಸ್ಥ ಆರೋಪಿಗಳೇ ಈ ದುಷ್ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆಯ ಕುರಿತಂತೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ದೇವಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
Next Story





