ಉಡುಪಿ ಜಿಲ್ಲೆಯ ಒಬ್ಬನಲ್ಲಿ ಕೊರೋನ ಸೋಂಕು ಪತ್ತೆ
ಉಡುಪಿ : ಜಿಲ್ಲೆಯಲ್ಲಿ ಇಂದು ಒಬ್ಬನಲ್ಲಿ ಹೊಸದಾಗಿ ಕೋವಿಡ್ -೧೯ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲೀಗ ಒಟ್ಟು ಐವರು ಅವರವರ ಮನೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.
ಶನಿವಾರ ಜಿಲ್ಲೆಯ 456 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಉಡುಪಿ ತಾಲೂಕಿನಲ್ಲಿ ೩೪೮ ಮಂದಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನುಳಿದಂತೆ ಕುಂದಾಪುರ ತಾಲೂಕಿನ ೮೩ ಹಾಗೂ ಕಾರ್ಕಳ ತಾಲೂಕಿನ ೨೫ ಮಂದಿಯಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.
ದಿನದಲ್ಲಿ ಯಾರೂ ಸೋಂಕಿನಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಸದ್ಯ ಚಿಕಿತ್ಸೆ ಯಲ್ಲಿರುವವರ ಸಂಖ್ಯೆ ೫ ಆಗಿದೆ. ಜ.೧ರ ನಂತರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ ೧೮,೪೨೭ ಆದರೆ, ಚೇತರಿಸಿಕೊಂಡವರ ಸಂಖ್ಯೆ ೧೮೪೮೯ ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.
ಜಿಲ್ಲೆಯಲ್ಲಿ ಇಂದು ಒಟ್ಟು ೨೦೩ ಮಂದಿ ಮಾತ್ರ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಒಬ್ಬರು ಮಾತ್ರ ಮೊದಲ ಡೋಸ್ ಲಸಿಕೆ ಪಡೆದರೆ, ೧೯೭ ಮಂದಿ ಎರಡನೇ ಡೋಸ್ ಹಾಗೂ ಐವರು ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ ಪಡೆದಿದ್ದಾರೆ.





