ಉಡುಪಿ: 29ನೇ ವರ್ಷದ ಪದ್ಮಶಾಲಿ ಕ್ರೀಡೋತ್ಸವಕ್ಕೆ ಚಾಲನೆ

ಉಡುಪಿ : ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ಹಾಗೂ ಇಚ್ಚಾಶಕ್ತಿಗಳಿಂದ ಮಾತ್ರವೇ ಸಮುದಾಯದ ಸಂಘಟನೆ ಸಾಧ್ಯ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವುದರಿಂದ ಸಾಮಾಜಿಕ ಸಂಬಂಧ ಗಟ್ಟಿಯಾಗುವು ದಕ್ಕೆ ಸಾಧ್ಯವಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಆಶ್ರಯದಲ್ಲಿ ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಆತಿಥ್ಯದಲ್ಲಿ ಉಡುಪಿ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಲಾದ ಪದ್ಮಶಾಲಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಮಹಾಸಭಾ ಮಾಜಿ ಅಧ್ಯಕ್ಷ ಎಸ್.ಸದಾನಂದ ಶೆಟ್ಟಿಗಾರ್ ಉದ್ಯಾವರ ಉದ್ಘಾಟಿಸಿದರು. ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಅಶೋಕ್ ಕುಮಾರ್ ಭಾವಿಕಟ್ಟಿ, ಮಣಿಪಾಲ ಡಾಟ್ ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ನಾಗರಾಜ್ ಶೆಟ್ಟಿಗಾರ್ ಕಟೀಲ್ ಅವರ ನಿರ್ದೇಶನದಲ್ಲಿ ಉದ್ಯೋಗ ಮಾಹಿತಿ ಶಿಬಿರ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ದಕ್ಷಿಣ ಕನ್ನಡ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ಗಿರಿಧರ್ ಆಚಾರ್ಯ, ದೇವದಾಸ್ ವಿ.ಶೆಟ್ಟಿಗಾರ್, ಮಂಜುನಾಥ್ ಮಣಿಪಾಲ, ಮೊಕ್ತೇಸರ ಡಾ.ಜಯರಾಮ್ ಶೆಟ್ಟಿಗಾರ್, ಜ್ಯೋತಿ ಪ್ರಸಾದ್ ಶೆಟ್ಟಿಗಾರ್, ಬಾಲಕೃಷ್ಣ ಶೆಟ್ಟಿಗಾರ್, ಪ್ರಭಾಶಂಕರ್ ಶೆಟ್ಟಿಗಾರ್, ಜನಾರ್ದನ್ ಶೆಟ್ಟಿಗಾರ್, ರತ್ನಾಕರ್ ಕಾಂತಪ್ಪ ಗುರಿಕಾರ, ಭಾಸ್ಕರ್ ಶೆಟ್ಟಿಗಾರ್, ಡಾ.ಶಿವಪ್ರಸಾದ ಕೆ. ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷರ ರತ್ನಾಕರ್ ಇಂದ್ರಾಳಿ ಸ್ವಾಗತಿಸಿದರು. ಬೆಂಗಳೂರಿನ ಉಪನ್ಯಾಸಕಿ ನವ್ಯಾಶ್ರೀ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿ ಕಾರಿ ರಾಘವ ಶೆಟ್ಟಿಗಾರ್ ವಂದಿಸಿದರು.







