Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಭಗವದ್ಗೀತೆ: ಅನಗತ್ಯ ವಿವಾದ ಬೇಕೆ?

ಭಗವದ್ಗೀತೆ: ಅನಗತ್ಯ ವಿವಾದ ಬೇಕೆ?

ವಾರ್ತಾಭಾರತಿವಾರ್ತಾಭಾರತಿ21 March 2022 12:05 AM IST
share
ಭಗವದ್ಗೀತೆ: ಅನಗತ್ಯ ವಿವಾದ ಬೇಕೆ?

ಕೊರೋನೋತ್ತರದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಅಧೋಗತಿ ತಲುಪಿದೆ. ಸರಕಾರಿ ಶಾಲೆಗಳ ಸ್ಥಿತಿ ಇನ್ನಷ್ಟು ಕಳಪೆಯಾಗಿದೆ. ಬಡತನದಿಂದ ಸಾವಿರಾರು ಮಕ್ಕಳು ಶಾಲೆ ತೊರೆದಿದ್ದಾರೆ. ಅವರನ್ನು ಮರಳಿ ಶಾಲೆಗೆ ಸೇರಿಸುವ ದೊಡ್ಡ ಹೊಣೆಗಾರಿಕೆ ಸರಕಾರದ ಮೇಲಿದೆ. ಹಾಗೆಯೇ, ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಬೇಕಾದ ಮೂಲಭೂತ ಅಗತ್ಯಗಳನ್ನು ಒದಗಿಸಲು ಸರಕಾರ ಅನುದಾನವನ್ನು ಹೆಚ್ಚಿಸಬೇಕಾಗಿದೆ. ಕೊರೋನಾ ಚಂಡಮಾರುತ ಕೆಡವಿ ಹಾಕಿದ ಶಿಕ್ಷಣ ವ್ಯವಸ್ಥೆಯನ್ನು ಮರು ನಿರ್ಮಿಸುವ ಸಂದರ್ಭ ಇದಾಗಿದೆ. ಈ ನಿಟ್ಟಿನಲ್ಲಿ, ಶಿಕ್ಷಣ ಸಚಿವರು ರಾಜ್ಯಾದ್ಯಂತ ಸಂಚರಿಸಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸದ್ಯದ ಶಿಕ್ಷಣ ಕ್ಷೇತ್ರದ ಸ್ಥಿತಿಗತಿಯನ್ನು ಅವಲೋಕಿಸಬೇಕಾಗಿತ್ತು. ಆದರೆ ಸರಕಾರ ಶಿಕ್ಷಣ ಕ್ಷೇತ್ರವನ್ನು ಮೇಲೆತ್ತುವುದಕ್ಕಾಗಿ ಯೋಜನೆಗಳನ್ನು ರೂಪಿಸುವ ಬದಲು, ಶಿಕ್ಷಣ ಕ್ಷೇತ್ರದಲ್ಲಿ ಅನಗತ್ಯ ವಿವಾದಗಳನ್ನು ಹುಟ್ಟಿಸಿ ಹಾಕಿ ಅದನ್ನು ಇನ್ನಷ್ಟು ಕೆಡಿಸುವುದಕ್ಕೆ ಹೊರಟಿದೆ. ಸಮವಸ್ತ್ರದ ಹೆಸರಿನಲ್ಲಿ ನಾಡಿನ ಶಾಲೆಗಳನ್ನು ರಣರಂಗ ಮಾಡಿದ ಸರಕಾರ, ಇದೀಗ ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಪಠ್ಯವಾಗಿಸುವ ಕುರಿತಂತೆ ಹೇಳಿಕೆಗಳನ್ನು ನೀಡಿ ಪರ-ವಿರೋಧ ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈಗ ಇರುವ ಶಿಕ್ಷಣವನ್ನು, ಪಠ್ಯಗಳನ್ನು ಆಧುನಿಕ ದಿನಗಳಿಗೆ ಪೂರಕವಾಗಿ ಸುಧಾರಣೆ ಮಾಡುವ ಬದಲು, ಇನ್ನಷ್ಟು ಅನಗತ್ಯ ಪಠ್ಯಗಳನ್ನು ಸೇರಿಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದ ಹಿನ್ನಡೆ ಚರ್ಚೆಗೆ ಬರದಂತೆ ನೋಡಿಕೊಳ್ಳುವುದಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನಗತ್ಯ ವಿವಾದಗಳನ್ನು ಸರಕಾರ ಸೃಷ್ಟಿಸುತ್ತಿದೆಯೇ ಎಂದು ಜನಸಾಮಾನ್ಯರು ಅನುಮಾನ ಪಡುವಂತಾಗಿದೆ.

ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಸೇರ್ಪಡೆಗೊಳಿಸುವುದು ಪಕ್ಕಕ್ಕಿರಲಿ, ಈಗ ಇರುವ ಪಠ್ಯಗಳನ್ನು ಎಷ್ಟರಮಟ್ಟಿಗೆ ವಿದ್ಯಾರ್ಥಿಗಳಿಗೆ ತಲುಪಿಸುವುದಕ್ಕೆ ಸಾಧ್ಯವಾಗಿದೆ? ಇರುವ ಪಠ್ಯಗಳನ್ನು ಕಲಿಸುವುದಕ್ಕೆ ಅರ್ಹ ಶಿಕ್ಷಕರು ಎಷ್ಟಿದ್ದಾರೆ? ಎನ್ನುವುದಕ್ಕೆ ಸರಕಾರ ಉತ್ತರಿಸಬೇಕಾಗಿದೆ. ವಿದ್ಯಾರ್ಥಿಗಳು ವೈದ್ಯಕೀಯದಂತಹ ಕಲಿಕೆಗಾಗಿ ವಿದೇಶಗಳಿಗೆ ತೆರಳುತ್ತಿದ್ದಾರೆ. ದಿನೇ ದಿನೇ ಭಾರತದ ಶೈಕ್ಷಣಿಕ ಕಲಿಕೆಯ ಗುಣಮಟ್ಟ ಕೆಳಗಿಳಿಯುತ್ತಿದೆ ಎಂದು ತಜ್ಞರು ಆತಂಕ ಪಡುತ್ತಿದ್ದಾರೆ. ಜೊತೆಗೆ ಶಿಕ್ಷಣ ವ್ಯವಸ್ಥೆಯೊಳಗೂ ವಿದೇಶಿ ಸಂಸ್ಥೆಗಳು ಕಾಲಿಡುತ್ತಿವೆ. ಇಂತಹ ಸಂದರ್ಭದಲ್ಲಿ, ಭಗವದ್ಗೀತೆಯನ್ನು ಸೇರಿಸುವ ಮೂಲಕ ಶಿಕ್ಷಣ ಹೇಗೆ ಗುಣಮಟ್ಟವನ್ನು ಪಡೆಯುತ್ತದೆ ಎನ್ನುವುದರ ಬಗ್ಗೆ ಇನ್ನೂ ಆಳುವವರು ಸ್ಪಷ್ಟೀಕರಣ ನೀಡಿಲ್ಲ. ಈಗಾಗಲೇ ಸೇನೆಯಂತಹ ಸೂಕ್ಷ್ಮ ವಲಯವನ್ನು ಕೇಂದ್ರ ಸರಕಾರ ರಾಜಕೀಯಕ್ಕೆ ಬಳಸುತ್ತಿರುವುದರ ಬಗ್ಗೆ ವ್ಯಾಪಕ ಟೀಕೆಗಳು ಬಂದಿವೆ. ಇದೀಗ ಶಿಕ್ಷಣದಂತಹ ಸೂಕ್ಷ್ಮ ವಲಯವನ್ನೂ ರಾಜಕೀಯಕ್ಕೆ ದುರುಪಯೋಗಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ. ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಸೇರಿಸುವುದರ ಹಿಂದೆ ಸಣ್ಣ ಪ್ರಾಮಾಣಿಕತೆಯಾದರೂ ಸರಕಾರದ ಬಳಿ ಇದ್ದಿದ್ದರೆ ಅದನ್ನು ಬೆಂಬಲಿಸಬಹುದಿತ್ತು. ಆದರೆ ಕೇವಲ ರಾಜಕೀಯ ಓಲೈಕೆಯ ಒಂದೇ ಕಾರಣಕ್ಕಾಗಿ ಶಿಕ್ಷಣವನ್ನು ಕುಲಕೆಡಿಸಲು ಹೊರಟಿರುವುದು ನಿಜಕ್ಕೂ ಆತಂಕಕಾರಿ. ಇದು ಶಿಕ್ಷಣಕ್ಕೆ ಮಾತ್ರವಲ್ಲ, ಸ್ವತಃ ಭಗವದ್ಗೀತೆಯ ಪಾವಿತ್ರತೆಗೂ ಎಸಗುವ ದ್ರೋಹವಾಗಿದೆ.

ದೇಶದಲ್ಲಿ ವಿಭಜನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಬೈಬಲ್, ಕುರ್‌ಆನ್, ಗ್ರಂಥಸಾಹೇಬ್, ವಚನ ಗ್ರಂಥಗಳು ಇವೆಲ್ಲವನ್ನು ಪರಿಚಯಿಸುವ ಸದುದ್ದೇಶವನ್ನು ಸರಕಾರ ಹೊಂದಿದೆಯಾದರೆ ನಿಜಕ್ಕೂ ಅಭಿನಂದನೀಯ. ಇಂದು ಭಗವದ್ಗೀತೆ ತೀರಾ ಅಪರಿಚಿತವಾಗಿಯೇನೂ ಉಳಿದಿಲ್ಲ. ರಾಮಾಯಣ, ಮಹಾಭಾರತಗಳೆರಡನ್ನೂ ಮಹಾಕಾವ್ಯವಾಗಿ ಸರ್ವಧಮೀಯರು ಈಗಾಗಲೇ ಸ್ವೀಕರಿಸಿದ್ದಾರೆ. ಸಾಧಾರಣವಾಗಿ ಭಗವದ್ಗೀತೆ, ಬೈಬಲ್, ಕುರ್‌ಆನ್‌ನ್ನು ಧರ್ಮಭೇದವನ್ನು ಮರೆತು ಈಗಾಗಲೇ ಓದಿ ಅರಗಿಸಿಕೊಂಡ ಹಲವರಿದ್ದಾರೆ. ಡಾ. ಅಂಬೇಡ್ಕರ್ ಅವರು ಭಗವದ್ಗೀತೆಯ ಲೋಪದೋಷಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಭಗವದ್ಗೀತೆ ವೈದಿಕರ ಧರ್ಮಗ್ರಂಥ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನು ಇತರರು ಓದಿ ತಿಳಿದುಕೊಳ್ಳುವುದರಿಂದ ನಮ್ಮ ಅರಿವಿನ ವಿಸ್ತಾರ ಹೆಚ್ಚುತ್ತದೆ. ಇದೇ ಸಂದರ್ಭದಲ್ಲಿ ಭಗವದ್ಗೀತೆಯೊಂದೇ ಭಾರತದಲ್ಲಿ ಧರ್ಮಗ್ರಂಥ ಅಲ್ಲ. ಲಿಂಗಾಯತರ ಧರ್ಮಗ್ರಂಥ ವಚನಗಳು. ಅವರು ಭಗವದ್ಗೀತೆಯನ್ನು ಒಪ್ಪುವುದಿಲ್ಲ. ಭಗವದ್ಗೀತೆ ಪ್ರತಿಪಾದಿಸುವ ಹಲವು ಚಿಂತನೆಗಳನ್ನು ಲಿಂಗಾಯತರ ವಚನಗಳು ನಿರಾಕರಿಸುತ್ತವೆೆ. ಹಾಗೆಯೇ ತುಳುನಾಡಿನಲ್ಲಿ, ತುಳು ದೈವಗಳು ಪಾಡ್ದನಗಳಿಂದ ಚೇತನವನ್ನು ಪಡೆಯುತ್ತವೆ. ಇಲ್ಲಿನ ಭೂತಸ್ಥಾನ ಅಥವಾ ದೈವಸ್ಥಾನದಲ್ಲಿ ಪಾಡ್ದನಕ್ಕೆ ಆದ್ಯತೆ. ಅಲ್ಲಿ ಭಗವದ್ಗೀತೆಯನ್ನು ಪಠಿಸಲಾಗುವುದಿಲ್ಲ. ಸಿಖ್ಖರ ಪಾಲಿಗೆ ಗ್ರಂಥಸಾಹೇಬ್ ಪವಿತ್ರಗ್ರಂಥ. ದಲಿತರಿಗೆ ಮಂಟೇಸ್ವಾಮಿ ಕಾವ್ಯ ಪರಮ ವೌಲ್ಯಗಳಿರುವ ಗ್ರಂಥ. ಈ ದೇಶದಲ್ಲಿ ಎಷ್ಟು ಧರ್ಮಗಳಿವೆಯೋ ಅಷ್ಟೂ ಧರ್ಮಗ್ರಂಥಗಳಿವೆ.

ಭಗವದ್ಗೀತೆಯೊಂದನ್ನೇ ಶಿಕ್ಷಣದಲ್ಲಿ ಸೇರಿಸುವುದರಿಂದ ಲಿಂಗಾಯತರು, ಸಿಖ್ಖರು, ದಲಿತರು, ಜೈನರು ಆಕ್ಷೇಪಿಸುವುದಿಲ್ಲ ಎಂದಾದರೆ ಸರಕಾರ ಧಾರಾಳವಾಗಿ ಅದನ್ನು ಅಳವಡಿಸಬಹುದು. ಭಗವದ್ಗೀತೆಯನ್ನು ಈ ನಾಡಿನ ಮುಸ್ಲಿಮರು, ಕ್ರಿಶ್ಚಿಯನ್ನರು ವಿರೋಧಿಸುತ್ತಾರೆ ಎನ್ನುವ ಆಸೆಯಿಂದ ಇಟ್ಟ ಹೆಜ್ಜೆ ಇದಾಗಿದ್ದಾರೆ ಸರಕಾರಕ್ಕೆ ನಿರಾಶೆಯಾಗಲಿದೆ. ಭಗವದ್ಗೀತೆ ಅಳವಡಿಕೆಯಿಂದ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ ಧಾರ್ಮಿಕತೆಗೆ ಯಾವುದೇ ಅಡ್ಡಿ ಉಂಟಾಗುದಿಲ್ಲ. ಯಾಕೆಂದರೆ ಭಗವದ್ಗೀತೆಯಲ್ಲಿ ಶೂದ್ರರು, ದಲಿತರ ಪ್ರಸ್ತಾಪವಿದೆಯೇ ಹೊರತು, ಕ್ರಿಶ್ಚಿಯನ್ನರು, ಮುಸ್ಲಿಮರ ಪ್ರಸ್ತಾಪಗಳಿಲ್ಲ. ಇಷ್ಟಕ್ಕೂ ಭಗವದ್ಗೀತೆ ಹುಟ್ಟಿರುವುದು ಮುಸ್ಲಿಮರ ಮೇಲೆ ಅಥವಾ ಕ್ರಿಶ್ಚಿಯನ್ನರ ಮೇಲೆ ಯುದ್ಧ ಮಾಡುವ ಸಂದರ್ಭದಲ್ಲಿ ಅಲ್ಲ. ಕೃಷ್ಣನು ಅರ್ಜುನನಿಗೆ ಯುದ್ಧ ಮಾಡು ಎಂದು ಹೇಳುವುದು ಹಿಂದೂಗಳ ವಿರುದ್ಧವೇ ಆಗಿದೆ.

ಅಲ್ಲಿ ಕೊಲ್ಲುವವರೂ ಹಿಂದೂಗಳೇ. ಕೊಲ್ಲಲ್ಪಡುವವರೂ ಹಿಂದೂಗಳೇ. ಕೃಷ್ಣ ಭಗವದ್ಗೀತೆಯ ಮೂಲಕ ಕೊಲ್ಲುವುದಕ್ಕೆ ಆದೇಶಿಸುವುದು ತನ್ನದೇ ಧರ್ಮೀಯರನ್ನು ಎನ್ನುವುದನ್ನು ಸರಕಾರ ಮರೆಯಬಾರದು. ಇದೇ ಸಂದರ್ಭದಲ್ಲಿ ಭಗವದ್ಗೀತೆಯೊಳಗೆ ಅಸಮಾನತೆಯನ್ನು ಎತ್ತಿ ಹಿಡಿಯುವ ಅಂಶಗಳಿವೆ ಎಂದು ದಲಿತರು ಆಕ್ಷೇಪಿಸುತ್ತಿದ್ದಾರೆ. ಇದು ನಿಜವೇ ಎನ್ನುವುದನ್ನು ಪರಿಶೀಲಿಸುವುದು ಒಳಿತು. ನಾಳೆ ಶಾಲೆಯೊಳಗೆ ಭಗವದ್ಗೀತೆಯು ಪ್ರತಿಪಾದಿಸುವ ಮೇಲು-ಕೀಳುಗಳು ದಲಿತರು ಮತ್ತು ಶೂದ್ರರ ಕುರಿತಂತೆ ಇನ್ನಷ್ಟು ಪೂರ್ವಾಗ್ರಹಗಳನ್ನು ಬಿತ್ತಲು ಕಾರಣವಾಗಬಾರದು. ಅದು ಅಂತಿಮವಾಗಿ ಶಾಲೆಯೊಳಗೆ ಜಾತಿ ಸಂಘರ್ಷಕ್ಕೆ ಕಾರಣವಾಗಬಹುದು. ಬ್ರಾಹ್ಮಣರ ಮತ್ತು ಕ್ಷತ್ರಿಯರ ಹಿರಿಮೆಯನ್ನು ಎತ್ತಿ ಹಿಡಿದು, ಉಳಿದ ಜಾತಿಯವರನ್ನು ಪಾಪ ಯೋನಿಯಿಂದ ಜನಿಸಿದವರು ಎನ್ನುವುದನ್ನು ಭಗವದ್ಗೀತೆ ಹೇಳುತ್ತದೆ ಎಂದಾದರೆ ಅದು ವಿದ್ಯಾರ್ಥಿಗಳ ಮಾನಸಿಕತೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಇದೇ ಸಂದರ್ಭದಲ್ಲಿ, ಜಗತ್ತು ಯುದ್ಧದಿಂದ ನರಳುತ್ತಿರುವ ಕಾಲ ಇದು. ಇಂತಹ ಸಂದರ್ಭದಲ್ಲಿ ಯುದ್ಧವನ್ನು ಮಾಡು ಎಂದು ಹೇಳುವುದಕ್ಕಾಗಿಯೇ ಹುಟ್ಟಿದ ಭಗವದ್ಗೀತೆಯನ್ನು ವಿದ್ಯಾರ್ಥಿಗಳ ಮನಸ್ಸಿಗೆ ತುರುಕುವುದು ಎಷ್ಟು ಸರಿ? ಎನ್ನುವುದನ್ನು ಸರಕಾರ ಆಲೋಚಿಸಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X