ಬೆಂಗಳೂರು: ಪುರಾತನ ವಿಗ್ರಹ ಸಾಗಾಟ; ಆರೋಪಿಯ ಬಂಧನ

ಬೆಂಗಳೂರು, ಮಾ. 20: ಪುರಾತನ ಕಾಲದ ವಿಷ್ಣುವಿನ ಕಂಚಿನ ವಿಗ್ರಹ ಸಾಗಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ಬೆಂಗಳೂರು ಏರ್ ಕಾರ್ಗೋ ಗುಪ್ತಚರ ಘಟಕದ ಅಧಿಕಾರಿಗಳು ಪತ್ತೆ ಮಾಡಿದ್ದು, ಓರ್ವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಈ ವಿಗ್ರಹವನ್ನು ಭಾರತೀಯ ಪುರಾತತ್ವ ಇಲಾಖೆಯೂ ಪ್ರಾಚೀನ ವಿಗ್ರಹ ಎಂದು ಪ್ರಮಾಣೀಕರಿಸಿದೆ. ಆರೋಪಿ ವಿರುದ್ಧ 1972ರ ಪ್ರಾಚ್ಯ ಸಂಪತ್ತು ಕಾಯ್ದೆ 24ರಡಿ ಪ್ರಕರಣ ದಾಖಲು ಮಾಡಲಾಗಿದೆ. ವಿಗ್ರಹವು 22.5 ಕೆಜಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





