ಮಂಗಳೂರು: ಇನ್ನು ಮನೆಬಾಗಿಲಿಗೆ ಜನನ- ಮರಣ ಪ್ರಮಾಣಪತ್ರ

ಮಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಜನನ- ಮರಣ ಪ್ರಮಾಣಪತ್ರವನ್ನು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.
ಸೋಮವಾರದಿಂದಲೇ ಇದು ಜಾರಿಯಾಗಲಿದ್ದು, ಜನನ- ಮರಣ ಪ್ರಮಾಣಪತ್ರಕ್ಕೆ ಅಲೆದಾಟ ಇದರಿಂದ ತಪ್ಪಲಿದೆ. ಹೊಸ ಯೋಜನೆಯಡಿ ಎಂಸಿಸಿ ಈ ಪ್ರಮಾಣಪತ್ರಗಳನ್ನು ಭಾರತೀಯ ಅಂಚೆ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ತಲುಪಿಸಲಿದೆ.
"ಈಗಾಗಲೇ ನಾಗರಿಕರಿಗೆ ಈ ಸೌಲಭ್ಯ ಆರಂಭಿಸುವ ಬಗ್ಗೆ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಈ ಸಂಬಂಧ ಅಂಚೆ ಇಲಾಖೆ ಜತೆ ಒಡಂಬಡಿಕೆ ಮಾಡಿಕೊಂಡು ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್ ಅವರ ಸಮ್ಮುಖದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು" ಎಂದು ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.
Next Story