ಚೀನಾ: 133 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ

ಬೀಜಿಂಗ್ : ನೈಋತ್ಯ ಚೀನಾದಲ್ಲಿ 133 ಜನರನ್ನು ಹೊತ್ತೊಯ್ಯುತ್ತಿದ್ದ ಚೀನಾ ಈಸ್ಟರ್ನ್ ಪ್ಯಾಸೆಂಜರ್ ಜೆಟ್ ಪತನಗೊಂಡಿದೆ ಎಂದು ಸರಕಾರಿ ಮಾಧ್ಯಮ ವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ AFP ಸೋಮವಾರ ವರದಿ ಮಾಡಿದೆ.
ಬೋಯಿಂಗ್ 737 ವಿಮಾನವು ಗುವಾಂಗ್ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಗ್ರಾಮಾಂತರ ಪ್ರದೇಶದಲ್ಲಿ ಪತನಗೊಂಡಿದೆ ಹಾಗೂ "ಪರ್ವತದಲ್ಲಿ ಬೆಂಕಿ ಕಾಣಿಸಿಕೊಂಡಿದೆ". ರಕ್ಷಣಾ ತಂಡಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸರಕಾರಿ ಪ್ರಸಾರಕ ಸಿಸಿಟಿವಿ ತಿಳಿಸಿದೆ.
ವಿಮಾನ ಪತನದ ಬಳಿಕ ಸಾವು-ನೋವಿನ ಕುರಿತು ವರದಿಯಾಗಿಲ್ಲ.
Powerful visuals china crash-
— Chaudhary Parvez (@ChaudharyParvez) March 21, 2022
A #Boeing-737 flight carrying 133 people #crashed in Tengxian County of south China's #Guangxi, causing a mountain #fire. Casualties unknown at the moment.#China #Airlines #Crashed #Boeing737 #ChinaEasternAirlines #坠毁 #中国#航空公司 #碰撞 pic.twitter.com/Vdc0F1k74Q
Next Story







