ಶ್ರೀ ಶಾರದಾ ಮಹಿಳಾ ಮಂಡಲಕ್ಕೆ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪ್ರಶಸ್ತಿ

ಮಂಗಳೂರು, ಮಾ.21: ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಉರ್ವ ಸ್ಟೋರ್ ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಾರ್ಷಿಕ ಸ್ಪರ್ಧಾ ಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಶ್ರೀ ಶಾರದಾ ಮಹಿಳಾ ಮಂಡಲದ ಸದಸ್ಯೆಯರು ಭಾಗವಹಿಸಿ ದ್ವಿತೀಯ ತಂಡ ಪ್ರಶಸ್ತಿ ಗಳಸಿದ್ದಾರೆ.
ಅತ್ಯುತ್ತಮ ಸಾಧಕ ಮಹಿಳಾ ಮಂಡಲಗಳ ಪೈಕಿ ತೃತೀಯ ಪ್ರಶಸ್ತಿ ಮತ್ತು ನಾಲ್ಕು ವೈಯಕ್ತಿಕ ಬಹುಮಾನವನ್ನು ಪಡೆದಿದೆ.
ಪ್ರಶಸ್ತಿಯನ್ನು ರೂಪದರ್ಶಿ ಶ್ವೇತಾ ಸುವರ್ಣರಿಂದ ಶ್ರೀ ಶಾರದಾ ಮಹಿಳಾ ಮಂಡಲದ ಅಧ್ಯಕ್ಷೆ ಶರ್ಮಿಳಾ ರಘುರಾಮ್, ಕಾರ್ಯದರ್ಶಿ ವೀಣಾ ಕಾರಂತ್, ಶೈಲಾ ರಾವ್, ಪೂರ್ಣಿಮಾ ಕದ್ರಿ, ರಂಜಿತಾ, ಜಯಲಕ್ಷ್ಮೀ, ಔರಂತಿ, ಮಮತಾ, ಪದ್ಮಾ ಹಾಗೂ ಇತರ ಸದಸ್ಯೆಯರು ಸ್ವೀಕರಿಸಿದರು.
ಸಮಾರಂಭದಲ್ಲಿ ಮಂಗಳೂರು ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ, ಗೌರವಾಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ದೇವಕಿ ಅಚ್ಯುತ ಮೊದಲಾದವರು ಉಪಸ್ಥಿತರಿದ್ದರು.
Next Story