ಅಡ್ಡೂರು: ಉಚಿತ ಹೃದ್ರೋಗ, ನೇತ್ರ ತಪಾಸಣಾ ಶಿಬಿರ

ಮಂಗಳೂರು : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಅಡ್ಡೂರು ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಮತ್ತು ಲೈಫ್ ಲೈನ್ ಹೆಲ್ತ್‌ಕೇರ್ ಪ್ಲಸ್ ಕ್ಲಿನಿಕ್ ಬಿ.ಸಿ. ರೋಡ್ ಇದರ ಸಹಯೋಗದೊಂದಿಗೆ ಉಚಿತ ಹೃದ್ರೋಗ ಮತ್ತು ನೇತ್ರ ತಪಾಸಣಾ ಶಿಬಿರವು ಅಲ್ ಮದ್ರಸತುಲ್ ಬದ್ರಿಯಾ ಸಭಾಂಗಣದಲ್ಲಿ ನಡೆಯಿತು.
ಬ್ಲಡ್ ಡೋನರ್ಸ್ ಫೋರಂ ಅಡ್ಡೂರು ಇದರ ಅಧ್ಯಕ್ಷ ಖಾಸಿಮ್ ಪ್ಯಾರ ಅವರ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ನರಸಿಂಹ ಪೈ ಹೈದ್ರೋಗ ತಪಾಸಣೆ ಮತ್ತು ಲೈಫ್‌ಲೈನ್ ಹೆಲ್ತ್ ಕೇರ್ ಪ್ಲಸ್ ಬಿ.ಸಿ.ರೋಡ್ ಇದರ ನೇತ್ರ ತಜ್ಞ ಡಾ. ಶಾಹಿಕ್ ನೇತ್ರ ತಪಾಸಣೆ ಹಾಗೂ ಅಡ್ಡೂರಿನ ರಿಫಾ ಕ್ಲಿನಿಕ್‌ನ ಡಾ. ಇಕೆಎ ಸಿದ್ದೀಕ್ ಆರೋಗ್ಯ ತಪಾಸಣೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯ ಸೇವೆ ಸಲ್ಲಿಸಿದ ಡಾ. ಇಕೆಎ ಸಿದ್ದೀಕ್, ಡಾ. ಸ್ವಾಲಿಹತ್ ಎಸ್, ಡಾ. ಪುಷ್ಪಲತಾ ಇವರನ್ನು ಸನ್ಮಾನಿಸಲಾಯಿತು.
ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಸ್ವದಕತ್ತುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಯಾಗಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಜಲೀಲ್ ಕೆ. ಬದ್ರಿಯಾ ಜಮಾಅತ್ ಕಮಿಟಿ ಅಡ್ಡೂರು ಇದರ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ. ಪಿಎಫ್‌ಐ ಮೆಡಿಕಲ್ ಉಸ್ತುವಾರಿ ಇಲ್ಯಾಸ್ ಬಜ್ಪೆ, ಗುರುಪುರ ಗ್ರಾಪಂ ಅಧ್ಯಕ್ಷ ಯಶವಂತ್ ಶೆಟ್ಟಿ, ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಅಹ್ಮದ್ ಬಾವ, ಬಾಬಾ ಪಕ್ರುದ್ದೀನ್ ಜುಮಾ ಮಸ್ಜಿದ್ ಪೊಳಲಿ ಅಧ್ಯಕ್ಷ ಮುಹಮ್ಮದ್ ಪೊಳಲಿ, ಎಂಎಚ್. ಮೈಯದ್ದಿ, ಹಾಜಿ ಇಸ್ಮಾಯಿಲ್ ಗೇಟ್, ಗುರುಪುರ ಗ್ರಾಪಂ ಸದಸ್ಯರಾದ ಎ.ಕೆ. ರಿಯಾಝ್, ಅಶ್ರಫ್, ಮನ್ಸೂರ್, ಶಾಹಿಕ್, ಎಸ್‌ಡಿಪಿಐ ಗುರುಪುರ ಗ್ರಾಮ ಸಮಿತಿಯ ಅಧ್ಯಕ್ಷ ಎ.ಕೆ. ಮುಸ್ತಾಕ್ ಭಾಗವಹಿಸಿದ್ದರು.
ಶರೀಫ್ ಗೋಳಿಪಡ್ಫು ಪ್ರಾಸ್ತಾವಿಕ ಭಾಷಣ ಮಾಡಿದರು.ರಹೀಮ್ ಬೊಟ್ಟಿಕ್ಕೆರೆ ಸ್ವಾಗತಿಸಿದರು. ಅಸ್ತಾರ್ ಕಾರ್ಯಕ್ರಮ ನಿರೂಪಿಸಿದರು.