ಕಾಶ್ಮೀರಿ ಫೈಲ್ಸ್ ಸಿನಿಮಾ ಕಾಶ್ಮೀರದ ವಾಸ್ತವ ಚಿತ್ರಣವನ್ನು ನೀಡುವುದಿಲ್ಲ : ಬೃಂದಾ ಕಾರಟ್

ಮಂಗಳೂರು : ಕಾಶ್ಮೀರಿ ಫೈಲ್ಸ್ ಸಿನಿಮಾ ಕಾಶ್ಮೀರದ ವಾಸ್ತವ ಚಿತ್ರಣವನ್ನು ನೀಡುವುದಿಲ್ಲ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ತಿಳಿಸಿದ್ದಾರೆ.
ಅವರು ಇಂದು ನಗರಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ಕಾಶ್ಮೀರಿ ಪಂಡಿತರ ಜೊತೆಗೆ ಇತರ ಸಮುದಾಯದ ಜನರು ತೊಂದರೆ ಅನುಭವಿಸಿದ್ದಾರೆ. ಕಾಶ್ಮೀರಿ ಪಂಡಿತರ ರೀತಿಯಲ್ಲಿ ಮುಖ್ಯ ವಾಗಿ ಅಲ್ಲಿನ ಮುಸಲ್ಮಾನರು ಉಗ್ರಗಾಮಿಗಳನ್ನು ವಿರೋಧಿಸಿದ್ದಾರೆ. ಆದರೆ ಕಾಶ್ಮೀರಿ ಫೈಲ್ ಸಿನಿಮಾದಲ್ಲಿ ಈ ಚಿತ್ರಣಗಳು ದೊರೆಯುವುದಿಲ್ಲ, ಬದಲಾಗಿ ಒಂದು ಕೋಮಿನ ಜನರ ಮೇಲಾಗಿರುವ ಹಿಂಸೆಯನ್ನು ಮಾತ್ರ ತೋರಿಸುವುದು ಕಾಶ್ಮೀರದ ಜನರಿಗೂ ಒಳಿತನ್ನು ಉಂಟು ಮಾಡುವ ಉದ್ದೇಶ ಹೊಂದಿಲ್ಲ. ಕಾಶ್ಮೀರದಲ್ಲಿ ಉಗ್ರಗಾಮಿಗಳ ಪ್ರವೇಶದಿಂದ ಸಮಗ್ರ ಕಾಶ್ಮೀರದ ಜನಜೀವನದ ಮೇಲೆ ದಾಳಿಯಾಗಿದೆ. ವಿರೋಧಿಸಿದ ಎಲ್ಲಾ ಸಮುದಾಯದ ಮೇಲೂ ದೌರ್ಜನ್ಯ ನಡೆದಿದೆ ಆದರೆ ಅದು ಮರೆಮಾಚಿ, ಒಂದು ಸಮುದಾಯದ ಮೇಲಾದ ದೌರ್ಜನ್ಯವನ್ನು ಮಾತ್ರ ಪ್ರಚಾರ ಮಾಡುವುದು ಆರೋಗ್ಯ ಕರ ಬೆಳವಣಿಗೆಯಲ್ಲ ಎಂದು ಬೃಂದಾ ಕಾರಟ್ ತಿಳಿಸಿದ್ದಾರೆ.





