ಉಡುಪಿ: ಮಾ.26ಕ್ಕೆ ತುಳು ಸಂಸ್ಕೃತಿ ಸಿರಿ ಕೂಟ
ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ ಇವುಗಳ ಸಹಯೋಗದಲ್ಲಿ ‘ತುಳು ಸಂಸ್ಕೃತಿ ಸಿರಿ ಕೂಟ’ ಇದೇ ಮಾ.೨೬ರ ಶನಿವಾರ ಎಂಜಿಎಂ ಕಾಲೇಜಿನ ಗೋವಿಂದ ಪೈ ಸಂಶೋಧನಾ ಕೇಂದ್ರದ ಧ್ವನ್ಯಾಲೋಕದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಹಾಗೂ ತುಳು ಕಾದಂಬರಿಕಾರ್ತಿ ಮತ್ತು ಸಾಹಿತಿ ಎಂ.ಜಾನಕಿ ಬ್ರಹ್ಮಾವರ ಇವರು ‘ಯಾನ್ ದಾಯಗ್ ತುಳುಟ್ಟು ಬರೆಯೆ (ನಾನೇಕೆ ತುಳುವಿನಲ್ಲಿ ಬರೆದೆ?)’ ಎಂಬ ವಿಷಯದ ಕುರಿತು ತುಳುಪೀಠದ ಕಪ್ಪಂದಕರ್ಯ ಕುಪ್ಪಣ್ಣ-ತುಂಬೆಕ್ಕ ಪ್ರತಿಷ್ಠಾನ ಮೂಡುಬೆಳ್ಳೆ ದತ್ತಿ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ತುಳು ಪಾಡ್ದನ ಸಮೀಕ್ಷೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ‘ಸಂಸ್ಕೃತಿ ಸಿರಿ’ ಬಹುಮಾನ ವಿತರಣೆ ಮುದ್ದು ಮೂಡುಬೆಳ್ಳೆ ಇವರಿಂದ ನಡೆಯಲಿದೆ. ಅಪ್ಪಿ ಪಾಣಾರ ಮೂಡುಬೆಳ್ಳೆ ಇವರಿಗೆ ಸಂಸ್ಕೃತಿ ಸಿರಿ ಸನ್ಮಾನ ನಡೆಯಲಿದೆ. ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಉಪಸ್ಥಿತರಿರುವರು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.