Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಗ್ಗೇಜ್...

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಗ್ಗೇಜ್ ತಪಾಸಣೆಯ ನೆಪದಲ್ಲಿ ಮಾನಸಿಕ ಹಿಂಸೆ: ಅರೋಪ

ʼಬೆಲೆಬಾಳುವ ವಸ್ತುಗಳು ಚೆಲ್ಲಾಪಿಲ್ಲಿʼ

ವಾರ್ತಾಭಾರತಿವಾರ್ತಾಭಾರತಿ21 March 2022 9:32 PM IST
share

ಮಂಗಳೂರು : ಲಗ್ಗೇಜ್ ತಪಾಸಣೆಯ ನೆಪದಲ್ಲಿ ಬೆಲೆಬಾಳುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಲಕ್ಷಾಂತರ ರೂಪಾಯಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ಬೆಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿ, ಸಿಬ್ಬಂದಿ ವರ್ಗದ ವಿರುದ್ಧ ಪ್ರಯಾಣಿಕರು ಆರೋಪಿಸಿದ್ದಾರೆ.

ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿ ಎರಡ್ಮೂರು ವರ್ಷ ಕಷ್ಟಪಟ್ಟು ದುಡಿದ ಹಣದಿಂದ ಮನೆ ಮಂದಿಗೆ ಬೇಕಾದ ವಸ್ತುಗಳನ್ನು ಪ್ಯಾಕ್ ಮಾಡಿ ತಂದ ವಸ್ತುಗಳನ್ನು ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳು ತಪಾಸಣೆಯ ನೆಪದಲ್ಲಿ ಲಗ್ಗೇಜ್ ಬಿಚ್ಚಿ ಪರಿಶೀಲಿಸಿದ್ದಾರೆ. ಅದರಲ್ಲಿರುವ ಬೆಲೆಬಾಳುವ ವಸ್ತುಗಳ ಸಹಿತ ಎಲ್ಲವನ್ನೂ ಹೊರಗೆಳೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮಳೆನೀರಿಗೆ ಲಗ್ಗೇಜ್ ಒದ್ದೆಯಾಗಿದ್ದರೂ ಅಧಿಕಾರಿ, ಸಿಬ್ಬಂದಿ ವರ್ಗವು ಅದನ್ನು ಸಂರಕ್ಷಿಸಲು ಮುಂದಾಗಿಲ್ಲ ಎಂದು ಪ್ರಯಾಣಿಕರು ರವಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ʼವಾರ್ತಾಭಾರತಿʼಯೊಂದಿಗೆ ಅಳಲು ತೋಡಿಕೊಂಡರು.

ವಿದೇಶದಿಂದ ರವಿವಾರ ಬೆಂಗಳೂರಿಗೆ ಬಂದ ನಮ್ಮನ್ನು ಸುಮಾರು ಒಂದುವರೆ ಗಂಟೆಯ ಕಾಲ ನಮ್ಮನ್ನು ವಿಮಾನದಲ್ಲೇ ಕುಳ್ಳಿರಿಸಿದರು. ಲಗ್ಗೇಜ್‌ಗಳಲ್ಲಿ ಬಾಂಬ್ ಬಗ್ಗೆ ಎಂಬ ಮಾಹಿತಿ ಇದೆ. ಹಾಗಾಗಿ ವಿಶೇಷ ತಪಾಸಣೆ ಮಾಡಬೇಕಿದೆ ಎಂದು ಹೇಳಿದ ಅಧಿಕಾರಿಗಳು ನಮ್ಮನ್ನು ನಿಲ್ದಾಣದಲ್ಲೇ ಸುಮಾರು ಮೂರ್ನಾಲ್ಕು ಗಂಟೆ ಕಾಯಿಸಿ ದ್ದಾರೆ. ಲಗ್ಗೇಜ್‌ಗಳನ್ನು ಎತ್ತಿ ಕಸದಂತೆ ಎಸೆದಿದ್ದಾರೆ ಎಂದು ಆರೋಪಿಸಿದರಲ್ಲದೆ, ಒಂದು ವೇಳೆ ಆ ಅಧಿಕಾರಿ, ಸಿಬ್ಬಂದಿಯ ಮನೆಯವರ ಲಗ್ಗೇಜ್ ಆಗಿದ್ದರೆ ಅವರು ಹೀಗೆ ಎಸೆಯುತ್ತಿದ್ದರೇ? ಪ್ರಶ್ನಿಸಿದ್ದಾರೆ.

ನಾವು ವಿದೇಶದಲ್ಲಿ ಕಷ್ಟಪಟ್ಟು ದುಡಿದು ತಂದ ಸೊತ್ತು ಅದಾಗಿತ್ತು. ಇಲೆಕ್ಟ್ರಾನಿಕ್ಸ್ ಸಾಮಗ್ರಿಯೂ ಲಗ್ಗೇಜ್‌ನಲ್ಲಿತ್ತು. ಮಳೆ ನೀರಿಗೆ ಒದ್ದೆಯಾಗಿದೆ. ಅದನ್ನು ಬಳಕೆ ಮಾಡಲು ಸಾಧ್ಯವಾಗುವುದೋ ಎಂದು ಗೊತ್ತಿಲ್ಲ. ನಮ್ಮಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ವೃದ್ಧರು ಇದ್ದರು. ಅಷ್ಟು ಹೊತ್ತು ಕಾಯಿಸಿದರೂ ಒಂದು ತೊಟ್ಟು ನೀರನ್ನು ನಮಗೆ ಕೊಡಲಿಲ್ಲ. ಹಸಿವು ತಾಳಲಾರದೆ ನಾವು ಆಕ್ರೋಶ ವ್ಯಕ್ತಪಡಿಸಿದ ಬಳಿಕ ನೀರು ಕೊಟ್ಟರು. ನಾವೇನೋ ಭಾರತೀಯರು. ಸಹಿಸಿಕೊಳ್ಳುವವರು ಎಂದಿಟ್ಟುಕೊಳ್ಳೋಣ. ಆದರೆ ನಮ್ಮೊಂದಿಗೆ ಕೆಲವು ಮಂದಿ ವಿದೇಶಿ ಪ್ರಯಾಣಿಕರೂ ಇದ್ದರು. ಭಾರತದ ಬಗ್ಗೆ ಅವರ ಊರಿಗೆ ಹೋಗಿ ಏನು ಹೇಳ್ತಾರೋ ಏನೋ ಎಂದು ಚರಣ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಬಾಂಬ್ ಬಿಡಿ, ಏನೂ ಇಲ್ಲ, ಸುಮ್ಮನೆ ನಮ್ಮನ್ನು ತಪಾಸಣೆ ಮಾಡಿಸಿದ್ದಾರೆ. ಲಗ್ಗೇಜ್ ಸಾಮಗ್ರಿಯನ್ನು ಮೀನು ಬಿಡಿಸಿಟ್ಟಂತೆ ಬಿಡಿಸಿಟ್ಟಿದ್ದರು. ಅದನ್ನು ಕಂಡು ಸಹಿಸಲು ಸಾಧ್ಯವಾಗಲಿಲ್ಲ. ಸ್ಪಷ್ಟ ಮಾಹಿತಿಯೂ ಕೊಟ್ಟಿರಲಿಲ್ಲ. ನಾವು ಸ್ವಲ್ಪ ಆಕ್ರೋಶದಿಂದ ಮಾತನಾಡಿದೆವು. ತಡವಾಗುವುದಾದರೆ ಬಸ್ಸಿನಲ್ಲಾದರೂ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿದೆವು. ಕೊನೆಗೂ ನಮ್ಮನ್ನು ವಿಮಾನ ಹತ್ತಿಸಿದರು. ಸಂಜೆ ಮಂಗಳೂರಿಗೆ ಬಂದು ತಲುಪಬೇಕಿದ್ದ ನಾವು ಈಗ (ರವಿವಾರ ರಾತ್ರಿ ಸುಮಾರು ೧೧ ಗಂಟೆ) ಬಂದು ಮುಟ್ಟಿದೆವು ಎಂದು ಸಫ್ವಾನ್ ಉಳ್ಳಾಲ್, ರಕ್ಷಾ ಮತ್ತಿತರ ಪ್ರಯಾಣಿಕರು ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X