ಕಥೊಲಿಕ್ ಸಭಾ ಕಲ್ಯಾಣಪುರ ವಲಯ ಅಧ್ಯಕ್ಷರಾಗಿ ಲೂವಿಸ್ ಡಿಸೋಜ

ಲೂವಿಸ್ ಡಿಸೋಜ
ಉಡುಪಿ, ಮಾ.೨೧: ಕಥೊಲಿಕ್ ಸಭಾ ಕಲ್ಯಾಣಪುರ ವಲಯದ ೨೦೨೨-೨೩ ನೇ ಸಾಲಿನ ಅಧ್ಯಕ್ಷರಾಗಿ ಸಾಸ್ತಾನ ಸಂತ ಅಂತೋನಿ ಘಟಕದ ಲೂವಿಸ್ ಡಿಸೋಜ ಆಯ್ಕೆಯಾಗಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಟ್ರೈ ಸೆಂಟಿನರಿ ಸಭಾಂಗಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಸರ್ವಾನುಮತದಿಂದ ಲೂವಿಸ್ ಡಿಸೋಜ ಅಧ್ಯಕ್ಷರಾಗಿ ಆಯ್ಕೆಯಾದರು.
ಇತರ ಪದಾಧಿಕಾರಿಗಳ ವಿವರ: ನಿಕಟಪೂರ್ವ ಅಧ್ಯಕ್ಷರು- ರೋಜಿ ಬಾರೆಟ್ಟೊ, ನಿಯೋಜಿತ ಅಧ್ಯಕ್ಷ-ಅಶ್ವಿನ್ ರೋಚ್ ಕೊಳಲಗಿರಿ, ಉಪಾಧ್ಯಕ್ಷ- ರೋಜಿ ಕ್ವಾಡ್ರಸ್, ಕಾರ್ಯದರ್ಶಿ- ಆರ್ಚಿಬಾಲ್ಡ್ ಫುರ್ಟಾಡೊ, ಸಹ ಕಾರ್ಯದರ್ಶಿ-ಟ್ರೀಜಾ ಡಿಸೋಜಾ ಬ್ರಹ್ಮಾವರ, ಕೋಶಾಧಿಕಾರಿ- ಗಾರಿಪೀಲ್ಡ್ ಉರ್ಬಾನ್ ಲೂವಿಸ್ ಬ್ರಹ್ಮಾವರ, ಸಹ ಕೋಶಾಧಿಕಾರಿ- ಲವೀನಾ ಡಿ ಆಲ್ಮೇಡಾ ಪೇತ್ರಿ, ಆಮ್ಚೊ ಸಂದೇಶ ಪ್ರತಿನಿಧಿ- ಫೆಲಿಕ್ಸ್ ಪಿಂಟೊ ಕೆಮ್ಮಣ್ಣು ಆಯ್ಕೆಯಾದರು.
ರಾಜಕೀಯ ಸಂಚಾಲಕರಾಗಿ ಚಾರ್ಲ್ಸ್ ಡಿಆಲ್ಮೇಡಾ ಬಾರ್ಕೂರು, ಸರಕಾರಿ ಸವಲತ್ತುಗಳ ಸಂಚಾಲಕರಾಗಿ ಸಿರಿಲ್ ಮೊಂತೆರೋ ಕೊಳಲಗಿರಿ, ಆಂತರಿಕ ಲೆಕ್ಕಪರಿಶೋಧಕರಾಗಿ ಆಲ್ಫೋನ್ಸ್ ಡಿಸಿಲ್ವಾ, ಸ್ತ್ರೀ ಸಶಕ್ತೀಕರಣ ಸಂಚಾಲಕರಾಗಿ ಸೆಲಿನ್ ಕುಲಾಸೊ ತೊಟ್ಟಂ ಆಯ್ಕೆಯಾದರು.
ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯನ್ನು ರೋನಾಲ್ಡ್ ಆಲ್ಮೇಡಾ ಉಡುಪಿ ಮತ್ತು ಗ್ರೆಗರಿ ಪಿಕೆ ಡಿಸೋಜಾ ಶಂಕರಪುರ ನಡೆಸಿಕೊಟ್ಟರು.





