Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಲ್ಲಿದ್ದಾರೆ ಗೋಡ್ಸೆ ವಿರೋಧಿಗಳು?

ಎಲ್ಲಿದ್ದಾರೆ ಗೋಡ್ಸೆ ವಿರೋಧಿಗಳು?

-ಅಸ್ಮಾ, ಮಂಗಳೂರು-ಅಸ್ಮಾ, ಮಂಗಳೂರು21 March 2022 11:48 PM IST
share

ಮಾನ್ಯರೇ,

ಭಾರತದಲ್ಲಿ ಸದ್ಯ ನಡೆಯುತ್ತಿರುವುದೇನು? ಇದು ಗಾಂಧಿವಾದ ಮತ್ತು ಗೋಡ್ಸೆವಾದಗಳ ಪರಸ್ಪರ ಸಂಘರ್ಷ ಎಂದು ಕೆಲವರು ಹೇಳಿದರೆ ಇದು ಮನುವಾದಿಗಳು ಮತ್ತು ಜಾತ್ಯತೀತವಾದಿಗಳ ನಡುವಣ ಘರ್ಷಣೆ ಎಂದು ಮತ್ತೆ ಕೆಲವರು ಹೇಳುತ್ತಾರೆ. ಇನ್ನು ಕೆಲವರು ಇದನ್ನು ಹಿಂಸಾವಾದಿಗಳು ಮತ್ತು ಶಾಂತಿಯ ಪ್ರತಿಪಾದಕರ ಮಧ್ಯೆ ಏರ್ಪಟ್ಟಿರುವ ಜಗಳ ಎಂದು ಕರೆಯುತ್ತಿದ್ದಾರೆ. ಆದರೆ ಸಮಸ್ಯೆ ಏನೆಂದರೆ ಗೋಡ್ಸೆವಾದಿಗಳು, ಮನುವಾದಿಗಳು ಮತ್ತು ಹಿಂಸಾವಾದಿಗಳು ಎಲ್ಲೆಂದರಲ್ಲಿ ಹಗಲಿರುಳೂ ಚಟುವಟಿಕೆಯಲ್ಲಿರುವುದು ಎದ್ದು ಕಾಣುತ್ತದೆ. ಪ್ರತಿ ನಿಮಿಷವೂ ಅವರ ಬೆಂಕಿಹಚ್ಚುವ ಹೇಳಿಕೆ, ಭಾಷಣಗಳೆಲ್ಲಾ ಪತ್ರಿಕೆಗಳಲ್ಲೂ, ಟಿವಿ ಚಾನೆಲ್‌ಗಳಲ್ಲೂ ಸಾಮಾಜಿಕ ಮಾಧ್ಯಮಗಳಲ್ಲೂ ರಾರಾಜಿಸುತ್ತಿರುತ್ತವೆ. ಆದರೆ ಈ ದುಷ್ಟರನ್ನು ವಿರೋಧಿಸಬೇಕಾಗಿದ್ದ, ಅವರ ನಿಜಬಣ್ಣವನ್ನು ಬಯಲಿಗೆಳೆಯಬೇಕಾಗಿದ್ದ, ಅವರೆಲ್ಲ ಯಾವುದೇ ಸಮಾಜದ ನೈಜ ಪ್ರತಿನಿಧಿಗಳಲ್ಲ ಎಂದು ಸಮಾಜಕ್ಕೆ ಮನವರಿಕೆ ಮಾಡಿಸಬೇಕಾಗಿದ್ದ ಗಾಂಧಿವಾದಿ, ಜಾತ್ಯತೀತವಾದಿ, ಶಾಂತಿಪರ ಪಕ್ಷಗಳ ನಾಯಕರಾಗಲಿ ಕಾರ್ಯಕರ್ತರಾಗಲಿ ಎಲ್ಲೂ ಕಾಣಿಸುತ್ತಿಲ್ಲ. ಅವರು ಎಲ್ಲೂ ಈ ದುಷ್ಟರನ್ನು ವಿರೋಧಿಸುತ್ತಿಲ್ಲ. ದುಷ್ಟರ ದುಷ್ಟಹೇಳಿಕೆಗಳನ್ನು ಖಂಡಿಸುತ್ತಿಲ್ಲ. ತಮ್ಮ ಜಾತಿಯ ವೇದಿಕೆಗಳಲ್ಲಿ ಇದರ ವಿರುದ್ಧ ಮಾತನಾಡುತ್ತಿಲ್ಲ. ಇದರ ಅರ್ಥವೇನು?

ಕೋಮುವಾದಿ ಆಕ್ರಮಣಗಳನ್ನು ಮತ್ತು ಗೋಡ್ಸೆವಾದಿಗಳ ಬಹಿರಂಗ ಅಪರಾಧಗಳನ್ನು ಅಲ್ಪಸಂಖ್ಯಾತ ಸಮಾಜವು ಒಂಟಿಯಾಗಿ ಎದುರಿಸಬೇಕೇ? ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಪೊಲೀಸರನ್ನು ಒತ್ತಾಯಿಸುವ ಕೆಲಸವನ್ನೂ ಅವರೇ ಮಾಡಬೇಕೇ? ಗಾಂಧಿವಾದಿಗಳು ಗೋಡ್ಸೆವಾದಿಗಳ ತಂಡದ ಮೌನ ಸದಸ್ಯರಾಗಿ ಬಿಟ್ಟಿದ್ದಾರೆಯೇ? ತಾವು ಸೌಹಾರ್ದಪ್ರಿಯರೆಂದು ಹೇಳಿಕೊಳ್ಳುವ ಸೆಕ್ಯುಲರ್ ಪಕ್ಷಗಳ ನಾಯಕರು ಕೋಮುವಾದಿ ಪಕ್ಷಗಳ ಜೊತೆ ರಾಜಿ ಮಾಡಿಕೊಂಡಿದ್ದಾರೆಯೇ? ಅಲ್ಪಸಂಖ್ಯಾತರಿಗೆ ನೀವೆಷ್ಟು ದೊಡ್ಡ ಅನ್ಯಾಯ ಮಾಡಿದರೂ ನಾವು ಸೊಲ್ಲೆತ್ತುವುದಿಲ್ಲ ಎಂದು ಅವರೇನು ಸಂಘನಿಕೇತನದಲ್ಲಿ ಪ್ರತಿಜ್ಞೆ ಮಾಡಿದ್ದಾರೆಯೇ? ಇದೆಲ್ಲ ಸತ್ಯವಲ್ಲ ಎಂಬುದನ್ನು ಸಾಬೀತು ಪಡಿಸಬೇಕಿದ್ದರೆ ಸೆಕ್ಯುಲರ್ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಈ ವಿಷಯದಲ್ಲಿ ಸ್ಪಷ್ಟವಾಗಿ ಮಾತನಾಡಬೇಕು. ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಕೋಮುವಾದಿಗಳ ಒಂದೊಂದು ಅಪರಾಧವನ್ನು ಪ್ರಸ್ತಾಪಿಸಿ ಅವುಗಳನ್ನು ಕಠೋರವಾಗಿ ಖಂಡಿಸಬೇಕು. ಕೋಮುವಾದಿ ಅಪರಾಧಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು. ಆರಾಧನಾ ಸ್ಥಳಗಳನ್ನು ದ್ವೇಷ ಪ್ರಸಾರದ ವೇದಿಕೆಯಾಗಿ ಬಳಸುವುದನ್ನು ಅತ್ಯುಗ್ರವಾಗಿ ಖಂಡಿಸಬೇಕು. ಕೋಮುವಾದಿಗಳ ದ್ವೇಷದ ಆಂದೋಲನವನ್ನು ಸೋಲಿಸಲು ಸಕ್ರಿಯವಾಗಿ ಹೋರಾಟ ನಿರತರಾಗಬೇಕು. ಅಂತಹ ದೃಶ್ಯ ಯಾವಾಗ ಕಾಣಲು ಸಿಕ್ಕೀತು?
 

share
-ಅಸ್ಮಾ, ಮಂಗಳೂರು
-ಅಸ್ಮಾ, ಮಂಗಳೂರು
Next Story
X