ಕಾಸರಗೋಡು : ಸಹೋದರರೊಳಗಿನ ಜಗಳ ಕೊಲೆಯಲ್ಲಿ ಅಂತ್ಯ

ಥೋಮಸ್
ಕಾಸರಗೋಡು : ಸಹೋದರರೊಳಗಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಗೊಂಡ ಘಟನೆ ಸೋಮವಾರ ರಾತ್ರಿ ಪೆರ್ಲ ಸಮೀಪದ ಶೇಣಿ ಉಪ್ಪಳಿಗೆಯಲ್ಲಿ ನಡೆದಿದೆ.
ಉಪ್ಪಳಿಗೆಯ ಥೋಮಸ್ ಡಿಸೋಜ (45) ಕೊಲೆಗೀಡಾದವರು. ಅವರ ಸಹೋದರ ರಾಜೇಶ್ ( 37) ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಹತ್ತು ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಇಬ್ಬರ ನಡುವೆ ಜಗಳವಾಗಿದ್ದು ತಡೆಯಲು ಬಂದ ಥೋಮಸ್ ನ ಸಂಬಂಧಿಕ ವಿಲ್ಫ್ರೆಡ್ ಗೂ ಗಾಯಗಳಾಗಿವೆ.
ಜಗಳ ವಿಕೋಪಕ್ಕೆ ತಿರುಗಿ ಥೋಮಸ್ ನನ್ನು ರಾಜೇಶ್ ಇರಿದಿದ್ದು, ಬೊಬ್ಬೆ ಕೇಳಿ ಪರಿಸರವಾಸಿಗಳು ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಥೋಮಸ್ ರನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ರಾಜೇಶ್ ಬದಿಯಡ್ಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
Next Story





