ಮುಂಬೈ: ರಿಯಲ್ ಎಸ್ಟೇಟ್ ಕಂಪನಿ ಹಿರಾನಂದಾನಿ ಗ್ರೂಪ್ ಮೇಲೆ ಐಟಿ ದಾಳಿ

ಹೊಸದಿಲ್ಲಿ: ಶಂಕಿತ ತೆರಿಗೆ ವಂಚನೆಗಾಗಿ ರಿಯಲ್ ಎಸ್ಟೇಟ್ ಕಂಪನಿ ಹಿರಾನಂದಾನಿ ಗ್ರೂಪ್‌ಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಮಂಗಳವಾರ ದಾಳಿ ನಡೆಸಿದೆ ಎಂದು NDTV ವರದಿ ಮಾಡಿದೆ.
ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಕೆಲವು ಪ್ರಮುಖ ಅಧಿಕಾರಿಗಳ ನಿವಾಸಗಳು ಸೇರಿದಂತೆ ಸುಮಾರು 24 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರಂಜನ್ ಹಿರಾನಂದಾನಿ ಹಾಗೂ ಸುರೇಂದ್ರ ಹಿರಾನಂದಾನಿ ಎಂಬ ಇಬ್ಬರು ಸಹೋದರರಿಂದ 1978 ರಲ್ಲಿ ಹಿರಾನಂದಾನಿ ಡೆವಲಪರ್ಸ್ ಅನ್ನು ರಚಿಸಲಾಯಿತು ಹಾಗೂ ಇದು ಕಳೆದ ನಾಲ್ಕು ದಶಕಗಳಲ್ಲಿ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಅನೇಕ ಯೋಜನೆಗಳನ್ನು ನಿರ್ಮಿಸಿದೆ.
ನಿರಂಜನ್ ಹಾಗೂ ಸುರೇಂದ್ರ ಹಿರಾನಂದಾನಿ ಕೂಡ ಪ್ರತ್ಯೇಕ ರಿಯಲ್ ಎಸ್ಟೇಟ್ ಕಂಪನಿಗಳನ್ನು ನಡೆಸುತ್ತಿದ್ದಾರೆ. ನಿರಂಜನ್ ಹಿರಾನಂದಾನಿ, ಹಿರಾನಂದಾನಿ ಸಮುದಾಯಗಳ ಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದರೆ, ಸುರೇಂದ್ರ ಹಿರಾನಂದನಿ ಹೌಸ್ ಆಫ್ ಹಿರಾನಂದಾನಿ ಅಧ್ಯಕ್ಷ ಮತ್ತು ನಿರ್ದೇಶಕರಾಗಿದ್ದಾರೆ.





