ಮೈಸೂರು: ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 102 ನೇ ವಾರ್ಷಿಕ ಘಟಿಕೋತ್ಸವ ನಗರದ ಕ್ರಾಫಡ್೯ ಹಾಲ್ ನಲ್ಲಿ ಮಂಗಳವಾರ ನಡೆಯಿತು.
ರಾಜ್ಯಪಾಲ ಹಾಗೂ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವ ಉದ್ಘಾಟಿಸಿ ಬಳಿಕ ವಿಜ್ಞಾನಿ ಡಾ.ವಿ.ಕೆ.ಅತ್ರೆ, ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ನಟ ಪುನೀತ್ ರಾಜ್ ಕುಮಾರ್ ಅವರ ಪರವಾಗಿ ಪತ್ನಿ ಅಶ್ವಿನಿ ಮರಣೋತ್ತರ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದರು.
ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಅವರಿಗೂ ಇದೇ ವೇಳೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಒಟ್ಟು 28581 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದ್ದು, ಇದರಲ್ಲಿ 64.96% ಮಹಿಳಾ ಅಭ್ಯರ್ಥಿಗಳು 35% ಪುರುಷ ಅಭ್ಯರ್ಥಿಗಳು ಪದವಿಗೆ ಭಾಜನರಾದರು. ಒಟ್ಟು 213 ಅಭ್ಯರ್ಥಿಗಳು ಒಟ್ಟು 376 ಪದಕ ಮತ್ತು 216 ಬಹುಮಾನ ಪಡೆದರು.
ವಿಜ್ಞಾನ ವಿಭಾಗ ರಸಾಯನ ಶಾಸ್ತ್ರದಲ್ಲಿ ಜಿ.ಎಂ.ಬಾವನ 19 ಚಿನ್ನದ ಪದಕ ಪಡೆದರೆ. ಕನ್ನಡ ಎಂ.ಎ ವ್ಯಾಸಾಂಗದಲ್ಲಿ ಮಹದೇಸ್ವಾಮಿ 15 ಚಿನ್ನದ ಪದಕ ಪಡೆದರು.
ಘಟಿಕೊತ್ಸವದಲ್ಲಿ ಮೈಸೂರು ವಿವಿ ಕುಲಪತಿ ಡಾ.ಜಿ.ಹೇಮಂತ್ ಕುಮಾರ್, ಕುಲ ಸಚಿವ ಪ್ರೊ.ಶಿವಪ್ಪ, ಪ್ರೊ ಜ್ಞಾನಪ್ರಕಾಶ್, ಸಂಗಿತ ಗಜಾನ ಭಟ್, ಡಾ.ಎಸ್.ಸಿ.ಶರ್ಮ ಉಪಸ್ಥಿತರಿದ್ದರು.






.jpeg)
.jpg)
.jpg)
.jpg)
.jpg)

