'ಗಲ್ಲಿಬಾಯ್' ಸಿನಿಮಾ ಮೂಲಕ ಪ್ರಸಿದ್ಧಿ ಪಡೆದಿದ್ದ ರ‍್ಯಾಪರ್ 24 ರ ಹರೆಯದ ಎಂಸಿ ತೋಡ್ ಫೋಡ್ ನಿಧನ

ಹೊಸದಿಲ್ಲಿ: ಎಂಸಿ ತೋಡ್‌ಫೋಡ್ ಎಂದೇ ಖ್ಯಾತರಾಗಿದ್ದ ರ್ಯಾಪರ್ ಧರ್ಮೇಶ್ ಪರ್ಮಾರ್ ತಮ್ಮ 24ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಸಾವಿಗೆ ಕಾರಣವೇನೆಂಬ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಪರ್ಮಾರ್ ಅವರು ಗಲ್ಲಿ ಬಾಯ್ ಸಿನೆಮಾದ ಹಾಡು ಇಂಡಿಯಾ 91 ಗಾಗಿ ರ್ಯಾಪ್ ಮಾಡಿದ್ದರು. ಗಲ್ಲಿ ಬಾಯ್ ಚಿತ್ರದಲ್ಲಿ ನಟಿಸಿದ್ದ ರಣವೀರ್ ಸಿಂಗ್ ಮತ್ತು ಸಿದ್ಧಾಂತ್ ಚತುರ್ವೇದಿ, ಪರ್ಮಾರ್ ಅವರ ಸಾವಿಗೆ ಸಂತಾಪ ಸೂಚಿಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಗಲ್ಲಿ ಬಾಯ್ ನಿರ್ದೇಶಕಿ ಝೋಯಾ ಅಖ್ತರ್ ಕೂಡ ಎಂಸಿ ತೋಡ್‌ಫೋಡ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ "ನೀವು ಬಹಳ ಬೇಗನೇ ಹೊರಟು ಹೋದಿರಿ" ಎಂದು ಬರೆದಿದ್ದಾರೆ.
ಎಂಸಿ ಟಾಡ್ ಫಾಡ್ ಅವರು ಮುಂಬೈ ಮೂಲದ ಹಿಪ್ ಹಾಪ್ ಬ್ಯಾಂಡ್ ಸ್ವದೇಸಿ ಸದಸ್ಯರಾಗಿದ್ದರು. ಸ್ವದೇಸಿ ತನ್ನ ಅಧಿಕೃತ ಪುಟದಲ್ಲಿ ಟಾಡ್ ಫಾಡ್ ಅವರನ್ನು ಸ್ಮರಿಸಿ ಪೋಸ್ಟ್ ಮಾಡಿ "ನಿಮ್ಮನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ, ಸಂಗೀತದ ಮೂಲಕ ನೀವು ಚಿರಸ್ಥಾಯಿಯಾಗಿರುತ್ತೀರಿ" ಎಂದು ಬರೆದಿದೆ.
It breaks our heart that you were taken so unexpectedly. Your memory will never leave us and live long in our hearts. Gone too soon.
— The Dharavi Dream Project (@TDDP_IN) March 21, 2022
Rest in peace
Dharmesh Parmar (@mctodfod) 1997-2022 pic.twitter.com/lmjlYOSvbI







