ಬಜ್ಪೆ; ದೇವಸ್ಥಾನ ಮಲಿನ ಪ್ರಕರಣ: ಆರೋಪಿ ಸೆರೆ

ಮಂಗಳೂರು, ಮಾ. 22: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಗ್ರಾಮದ ಶ್ರೀ ಕೋರ್ದಬ್ಬು ದೈವಸ್ಥಾನ ಮಲಿನಗೊಳಿಸಿದ ಆರೋಪದಲ್ಲಿ ಕಿನ್ನಿಕಂಬಳದ ಶಾಹುಲ್ ಹಮೀದ್ ಎಂಬಾತನನ್ಬು ಇಂದು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಮಾ.20ರಂದು ಈ ದೈವಸ್ಥಾನವನ್ನು ಮಲಿನಗೊಳಿಸಲಾಗಿತ್ತು. ಈ ಬಗ್ಗೆ ಸಿಸಿ ಕ್ಯಾಮರಾದ ದೃಶ್ಯಗಳ ಆಧಾರದ ಮೇಲೆ ದೂರು ದಾಖಲಿಸಿದ ಕೇವಲ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
Next Story





