ಮಂಗಳವಾರ 12ರಿಂದ 14 ವರ್ಷದ 1282 ಮಕ್ಕಳಿಗೆ ಲಸಿಕೆ
ಉಡುಪಿ : ಜಿಲ್ಲೆಯಲ್ಲಿ ಮಂಗಳವಾರ 12ರಿಂದ 14ವರ್ಷದೊಳಗಿನ ಒಟ್ಟು 1282 ಮಕ್ಕಳಿಗೆ ಕೋವಿಡ್ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 13157 ಮಕ್ಕಳು ಈ ಲಸಿಕೆಯನ್ನು ಪಡೆದಂತಾಗಿದೆ.
ಅಲ್ಲದೇ ದಿನದಲ್ಲಿ ಒಟ್ಟು 3890 ಮಂದಿ ಇಂದು ಲಸಿಕೆಯನ್ನು ಪಡೆದು ಕೊಂಡಿದ್ದಾರೆ. 60 ವರ್ಷ ಮೇಲಿನ 330 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 360 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ ಪಡೆದರೆ, ೧೩೧೦ ಮಂದಿ ಮೊದಲ ಡೋಸ್ ಹಾಗೂ ೨೨೨೦ ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ಒಬ್ಬರು ಪಾಸಿಟಿವ್: ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಬಂದ ಒಬ್ಬರಲ್ಲಿ ಇಂದು ಕೋವಿಡ್-೧೯ ಸೋಂಕು ಪತ್ತೆಯಾಗಿದೆ. ದಿನದಲ್ಲಿ ಒಟ್ಟು ೨೫೨ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಉಡುಪಿ ತಾಲೂಕಿನಲ್ಲಿ ೧೮೬, ಕುಂದಾಪುರ ೪೮ ಹಾಗೂ ಕಾರ್ಕಳ ತಾಲೂಕಿನಲ್ಲಿ ೧೮ ಮಂದಿ ಪರೀಕ್ಷೆ ಗೊಳಗಾಗಿದ್ದು ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.
ಅದೇ ರೀತಿ ದಿನದಲ್ಲಿ ಯಾರೂ ಸೋಂಕಿನಿಂದ ಚೇತರಿಸಿಕೊಂಡಿಲ್ಲ. ಸದ್ಯ ಚಿಕಿತ್ಸೆಯಲ್ಲಿರುವವರ ಸಂಖ್ಯೆ ೬ ಆಗಿದೆ. ಜ.೧ರ ನಂತರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ ೧೮,೪೨೮ ಆದರೆ, ಚೇತರಿಸಿಕೊಂಡವರ ಸಂಖ್ಯೆ ೧೮೪೮೯ ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.







