ಅಂಧ ಮಕ್ಕಳ ಶಾಲೆಯಲ್ಲಿ ಮಳೆ ಕೊಯ್ಲು ಉಪಕರಣ ಉದ್ಘಾಟನೆ

ಮಂಗಳೂರು : ಸೆಂಟ್ರಲ್ ಎಕ್ಸೈಸ್ ಮತ್ತು ಸೆಂಟ್ರಲ್ ಟ್ಯಾಕ್ಸ್ ಇಲಾಖೆಯ ಸ್ವಚ್ಛತಾ ಯೋಜನೆಯ ಅಂಗವಾಗಿ ನಗರದ ಕೋಟೆಕಣಿ ರಸ್ತೆಯ ರೋಮನ್ ಆ್ಯಂಡ್ ಕ್ಯಾಥರಿನ್ ಲೋಬೊ ಚಾರಿಟಿ ಹೋಮ್‌ನ ಅಂಧ ಮಕ್ಕಳ ವಸತಿಯುತ ಶಾಲೆಯಲ್ಲಿ ಅಳವಡಿಸಿದ ಮಳೆ ಕೊಯ್ಲು ಉಪಕರಣ ಹಾಗೂ ನೀರಿನ ಟ್ಯಾಂಕ್‌ನ್ನು ಮಂಗಳೂರು ಸೆಂಟ್ರಲ್ ಎಕ್ಸೈಸ್‌ನ ಕಮಿಷನರ್ ಇಮಾಮುದ್ದೀನ್ ಅಹ್ಮದ್ ಉದ್ಘಾಟಿಸಿದರು.
ಅಡಿಶನಲ್ ಕಮಿಷನರ್‌ಗಳಾದ ರೀನಾ ಶೆಟ್ಟಿ, ಜೋನ್ಸ್ ಜಾರ್ಜ್, ಎಂ.ರಮೇಶ್‌ಚಂದ್ರ, ಶೋಭಾ ಭಟ್, ಸೇವಾ ಭಾರತಿ ಸಂಸ್ಥೆಯ ನಿರ್ದೇಶಕರಾದ ನಾಗರಾಜ ಭಟ್, ವಿನೋದ್ ಶೆಣೈ, ರೋಮನ್ ಕ್ಯಾಥರಿನ್ ಲೋಬೊ ಚಾರಿಟಿ ಹೋಮ್‌ನ ಟ್ರಸ್ಟಿಗಳಾದ ಕೇತನ್ ಚಂದ್ರನ, ಕೇತನ್ ವಾಸನಿ, ವಿಶ್ವಾಸ್ ಕುಮಾರ್ ದಾಸ್ ಉಪಸ್ಥಿತರಿದ್ದರು.
ರೋಮನ್ ಆ್ಯಂಡ್ ಕ್ಯಾಥರಿನ್ ಲೋಬೊ ಅಂಧ ಮಕ್ಕಳ ವಸತಿಯುತ ಶಾಲೆಯ ಪ್ರಾಂಶುಪಾಲ ಕ್ಯಾಲಿಸ್ಟಸ್ ಡೆಸಾ ಸ್ವಚ್ಛತಾ ಯೋಜನೆಯ ವಿವರ ನೀಡಿದರು. ಗಜಾನನ ಪೈ ಸ್ವಾಗತಿಸಿದರು. ರಘುರಾಮ್ ವಂದಿಸಿದರು.
Next Story





