ಸಮಾಜ ಸೇವಕ, ಉದ್ಯಮಿ ಮೌಸೀರ್ ಸಾಮಣಿಗೆಗೆ ಗೌರವ ಡಾಕ್ಟರೇಟ್ ಪದವಿ, ಪ್ರಶಸ್ತಿ ಪ್ರದಾನ

ಉಳ್ಳಾಲ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಸೇವಕ ಹಾಗೂ ಉದ್ಯಮಿ ಮೌಸೀರ್ ಸಾಮಣಿಗೆ ಅವರಿಗೆ ಏಷ್ಯಾ ವೇದಿಕ್ ಕಲ್ಚರ್ ಯೂನಿವರ್ಸಿಟಿ (ಐ.ಎ.ಒ) ಏಷ್ಯಾ ವೇದಿಕ್ ಪೌಂಡೇಶನ್ ವತಿಯಿಂದ ತಮಿಳುನಾಡಿನ ಯಾದಗಿರಿಯ ಕ್ಲೆರ್ಟ ಮಾಹಲ್ ನಲ್ಲಿ ನಡೆದ ಡಾಕ್ಟರೇಟ್ ಪದವಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಮತ್ತು ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜಕೀಯ, ಸಮಾಜಸೇವೆ, ಉದ್ಯಮದ ಮೂಲಕ ಹಲವಾರು ಸಂಘ ಸಂಸ್ಥೆಗಳಲ್ಲಿ ನಾಯಕತ್ವವವನ್ನು ವಹಿಸಿಕೊಂಡು ಬಂದ ಅವರು ಮಾರ್ಚ್ 19ರಂದು ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಹಾಗೂ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿದ್ದಾರೆ.
Next Story