ವಿಶ್ವದ ನಂಬರ್ 1 ಟೆನಿಸ್ ತಾರೆ ಆಶ್ಲಿ ಬಾರ್ಟಿ ಅಚ್ಚರಿಯ ನಿವೃತ್ತಿ

ಆಶ್ಲಿ ಬಾರ್ಟಿ (ಫೋಟೊ: Twitter)
ಆಸ್ಟ್ರಿಯಾ: ವಿಶ್ವದ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರ್ತಿ ಆಸ್ಟ್ರಿಯಾದ ಆಶ್ಲಿ ಬಾರ್ಟಿ ವೃತ್ತಿಪರ ಟೆನಿಸ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಮೂರು ಗ್ರ್ಯಾಂಡ್ಸ್ಲಾಂ ಪ್ರಶಸ್ತಿ ಗೆದ್ದಿರುವ ಬಾರ್ಟಿ, ಮಾರ್ಚ್ 24ರಂದು ನಡೆಸಲು ಉದ್ದೇಶಿಸಿರುವ ಪತ್ರಿಕಾಗೋಷ್ಠಿಗೆ ಪೂರ್ವಭಾವಿಯಾಗಿ ಇನ್ಸ್ಟಾಗ್ರಾಂನಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
"ಇಂದು ಅತ್ಯಂತ ಕಠಿಣ ದಿನ ಮತ್ತು ತುಂಬು ಭಾವನೆಗಳಿಂದ ನಾನು ಟೆನಿಸ್ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಈ ಸುದ್ದಿಯನ್ನು ನಿಮ್ಮೊಂದಿಗೆ ಹೇಗೆ ಹಂಚಿಕೊಳ್ಳಬೇಕು ಎಂದು ನನಗೆ ತಿಳಿಯುತ್ತಿಲ್ಲ. ಆದ್ದರಿಂದ ನನ್ನ ಸ್ನೇಹಿತೆ @ಕ್ಯಾಸಿಡೆಲ್ಲಾಕಾ ಅವರ ನೆರವು ಕೋರಿದ್ದೇನೆ. ಈ ಕ್ರೀಡೆ ನನಗೆ ಎಲ್ಲವನ್ನೂ ನೀಡಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ ಮತ್ತು ಹೆಮ್ಮೆಯ ಭಾವನೆಯೊಂದಿಗೆ ವಿದಾಯ ಹೇಳುತ್ತಿದ್ದೇನೆ. ನನ್ನ ಪಯಣದಲ್ಲಿ ಬೆಂಬಲಿಸುತ್ತಾ ಬಂದ ಎಲ್ಲರಿಗೂ ಕೃತಜ್ಞತೆಗಳು. ನಾವೆಲ್ಲರೂ ಜತೆಗೂಡಿ ಸೃಷ್ಟಿಸಿದ ಜೀವಮಾನದ ಸ್ಮರಣೆಗೆ ನಾನು ಎಲ್ಲರಿಗೂ ಆಭಾರಿ. ಹೆಚ್ಚಿನದನ್ನು ನಾಳೆ ನಡೆಯುವ ನನ್ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತೇನೆ" ಎಂದು ಬಾರ್ಟಿ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಬಾರ್ಟಿ ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು. 2019ರಲ್ಲಿ ಫ್ರೆಂಚ್ ಓಪನ್ ಮತ್ತು 2021ರಲ್ಲಿ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ತಮ್ಮ 25ನೇ ವಯಸ್ಸಿನಲ್ಲಿ ಬಾರ್ಟಿಯವರ ನಿವೃತ್ತಿ ನಿರ್ಧಾರವನ್ನು ಡಬ್ಲ್ಯುಟಿಎ ದೃಢಪಡಿಸಿದೆ.
For every young girl that has looked up to you.
— wta (@WTA) March 23, 2022
For every one of us that you've inspired.
For your love of the game.
Thank you, @ashbarty for the incredible mark you've left on-court, off-court and in our hearts pic.twitter.com/6wp9fmO439







