Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘ಫೇಮ್ ಗೇಮ್’ ನಟಿಯೊಬ್ಬಳ ಬದುಕಿನ...

‘ಫೇಮ್ ಗೇಮ್’ ನಟಿಯೊಬ್ಬಳ ಬದುಕಿನ ಸುತ್ತ.....

ಮುಸಾಫಿರ್ಮುಸಾಫಿರ್23 March 2022 11:24 AM IST
share
‘ಫೇಮ್ ಗೇಮ್’ ನಟಿಯೊಬ್ಬಳ ಬದುಕಿನ ಸುತ್ತ.....

ಒಟಿಟಿಯ ಈ ದಿನಗಳಲ್ಲಿ ಸರಣಿ ಚಿತ್ರಗಳು ಸರಣಿಯಲ್ಲಿ ಸುದ್ದಿ ಮಾಡುತ್ತಿವೆ. ನೆಟ್‌ಫ್ಲಿಕ್ಸ್ ನಂತಹ ತಾಣದಲ್ಲಿ ಸ್ತ್ರೀ ಪ್ರಧಾನ ಭೂಮಿಕೆಯ ಸರಣಿಗಳು ಹೆಚ್ಚು ಬರುತ್ತಿವೆ. ಒಂದು ಕಾಲದಲ್ಲಿ ಮಿಂಚಿದ್ದ ತಾರೆಯರೆಲ್ಲ ಮತ್ತೆ ಮರು ಪ್ರವೇಶಕ್ಕೆ ಈ ತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪೂಜಾಭಟ್ ನಾಯಕತ್ವದ ‘ಮುಂಬೈ ಬೇಗಮ್ಸ್’ ಜನಪ್ರಿಯವಾದಂತೆಯೇ, ಇದೀಗ ಮಾಧುರಿ ದೀಕ್ಷಿತ್ ನಾಯಕಿಯಾಗಿ ನಟಿಸಿರುವ ‘ಫೇಮ್ ಗೇಮ್’ ಸುದ್ದಿಯಲ್ಲಿದೆ.

ಫೇಮ್‌ಗೇಮ್ ಸರಣಿಯನ್ನು ಬಿಜಯ್ ನಂಬಿಯಾರ್ ಮತ್ತು ಕರಿಶ್ಮಾ ಕೊಹ್ಲಿ ಅವರು ನಿರ್ದೇಶಿಸಿದ್ದಾರೆ. ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಅನಾಮಿಕಾ ಎನ್ನುವ ನಾಯಕಿಯ ಬದುಕನ್ನು ಇಡೀ ಸರಣಿ ವಸ್ತುವಾಗಿಸಿಕೊಂಡಿದೆ. ಈ ಹಿಂದೆ ಮಧುರ್ ಭಂಡಾರ್ಕರ್ ಅವರ ‘ಹಿರೋಯಿನ್’ ಚಿತ್ರ ಬಾಲಿವುಡ್ ಒಳಗಿರುವ ರಾಜಕೀಯವನ್ನು, ಇಲ್ಲಿನ ನಟಿಯರ ವಾಸ್ತವ ಬದುಕನ್ನು ತೆರೆದಿಡುವ ಪ್ರಯತ್ನ ನಡೆಸಿತ್ತು. ಫೇಮ್‌ಗೇಮ್ ಬಾಲಿವುಡ್‌ನ್ನು ಗುರಿ ಮಾಡದೇ ಒಬ್ಬ ನಟಿ ಸಾರ್ವಜನಿಕವಾಗಿ ತಾರೆಯಾಗಿ ಗುರುತಿಸುತ್ತಲೇ, ಖಾಸಗಿ ಬದುಕಿನಲ್ಲಿ ಅಸಹಾಯಕಳಾಗುತ್ತಾಳೆ ಎನ್ನುವುದನ್ನು ಭಿನ್ನವಾಗಿ ತೆರೆದಿಟ್ಟಿದೆ. ಬಾಲಿವುಡ್‌ನಲ್ಲಿ ದುರ್ಬಲವಾಗುತ್ತಿರುವ ತನ್ನ ಅಸ್ತಿತ್ವವನ್ನು ಮತ್ತೆ ಗಟ್ಟಿಗೊಳಿಸಲು ಆಕೆ ನಡೆಸುವ ಪ್ರಯತ್ನ ಇವೆಲ್ಲವನ್ನೂ ಅತ್ಯಂತ ಕುತೂಹಲಕಾರಿಯಾಗಿ ಸರಣಿಯಲ್ಲಿ ಕಟ್ಟಿಕೊಡಲಾಗಿದೆ.

ಸರಣಿ ಆರಂಭವಾಗುವುದೇ, ಖ್ಯಾತ ತಾರೆ ಅನಾಮಿಕ ಆನಂದ್(ಮಾಧುರಿ ಧೀಕ್ಷಿತ್) ನಾಪತ್ತೆಯಾಗುವುದರಿಂದ. ದೇಶಾದ್ಯಂತ ಈ ಸುದ್ದಿ ಸಂಚಲನವನ್ನು ಸೃಷ್ಟಿಸುತ್ತದೆ. ಪೊಲೀಸ್ ಅಧಿಕಾರಿ ಶೋಭಾ ತ್ರಿವೇದಿ (ರಾಜಶ್ರೀ ದೇಶಪಾಂಡೆ) ಅನಾಮಿಕಳ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾಳೆ. ಈ ತನಿಖೆಯ ಜೊತೆ ಜೊತೆಗೇ ಅನಾಮಿಕಳ ಹಿಂದಿನ ಬದುಕನ್ನು ನಿರೂಪಿಸುತ್ತಾ ಹೋಗಲಾಗುತ್ತದೆ. ಒಂದೆಡೆ ಅನಾಮಿಕ ನಾಪತ್ತೆಯಾಗುವ ಮೊದಲಿನ ಕತೆ, ಇನ್ನೊಂದೆಡೆ ನಾಪತ್ತೆಯಾದ ಸಂದರ್ಭದ ಬೆಳವಣಿಗೆಗಳು, ಇದೇ ಸಂದರ್ಭದಲ್ಲಿ ಅನಾಮಿಕ ನಾಪತ್ತೆಯಾದ ಬಳಿಕದ ಘಟನೆಗಳು ಹೀಗೆ ಮೂರು ಹಂತದಲ್ಲಿ ಚಿತ್ರ ಕತೆ ತೆರೆದುಕೊಳ್ಳುತ್ತದೆ. ಪತ್ತೇದಾರಿ ಶೈಲಿಯಲ್ಲಿ ಕತೆಯನ್ನು ಹೇಳಲಾಗಿದೆ.

ಜೊತೆ ಜೊತೆಗೆ ಅನಾಮಿಕಳ ಕೌಟುಂಬಿಕ ಸಂಘರ್ಷ, ವೈಯಕ್ತಿಕ ಪ್ರೇಮ ಸಂಕಟಗಳು, ಮಕ್ಕಳ ಜೊತೆಗಿನ ಆಕೆಯ ಹೊಣೆಗಾರಿಕೆ ಇವೆಲ್ಲವನ್ನು ಸರಣಿ ಪರಿಣಾಮಕಾರಿಯಾಗಿ ದಾಟಿಸುತ್ತದೆ. ತಾಯಿಯಾಗಿ, ನಟಿಯಾಗಿ, ಪತ್ನಿಯಾಗಿ, ಪ್ರೇಯಸಿಯಾಗಿ ಮಾಧುರಿ ದೀಕ್ಷಿತ್ ಸರಣಿಯುದ್ದಕ್ಕೂ ಆವರಿಸಿಕೊಳ್ಳುತ್ತಾರೆ. ಅನಾಮಿಕಳ ಮಗನಾಗಿ ಲಕ್ಷ್ವಿರ್ ಸರಣ್ ಪಾತ್ರವೂ ಗಮನಾರ್ಹ ಪೋಷಣೆಯಿಂದ ಕೂಡಿದೆ. ಸೂಪರ್ ಸ್ಟಾರ್ ಮನೀಶ್ ಖನ್ನಾ ಪಾತ್ರದಲ್ಲಿ ಮಾನವ್ ಕೌಲ್ ನಟನೆಯೂ ಗಟ್ಟಿಯಾಗಿದೆ. ಅನಾಮಿಕಳ ಪ್ರೇಮಿಯಾಗಿ ಆತ ಅನುಭವಿಸುವ ಸಂಕಟಗಳನ್ನು, ಆತನ ಅಂತ್ಯ ಮನಮುಟ್ಟುವಂತಿದೆ. ಸಿನೆಮಾ ತಾರೆಯಾಗುವ ಕನಸು ಕಾಣುವ ಅನಾಮಿಕಳ ಮಗಳ ಪಾತ್ರದಲ್ಲಿ ಮುಸ್ಕಾನ್ ಝಾಫರಿ ಪರಿಣಾಮಕಾರಿಯಾಗಿ ಮೂಡಿ ಬಂದಿದ್ದಾರೆ. ಅನಾಮಿಕಳ ಗಂಡನಾಗಿ ಸಂಜಯ್ ಕಪೂರ್ ಪಾತ್ರವೂ ನಿರ್ಲಕ್ಷಿಸುವಂತಹದಲ್ಲ. ಇದೊಂದು ನೆಗೆಟಿವ್ ಪಾತ್ರವಾದರೂ ಕಪೂರ್ ಅದಕ್ಕೆ ನ್ಯಾಯ ನೀಡಿದ್ದಾರೆ.

8 ಸಂಚಿಕೆಗಳನ್ನು ಈ ಸರಣಿ ಹೊಂದಿದೆ. ಕರಣ್ ಜೋಹರ್, ಸೋಮನ್ ಮಿಶ್ರಾ ಚಿತ್ರವನ್ನು ನಿರ್ಮಿಸಿದ್ದಾರೆ. ಫೆಬ್ರವರಿ 25ರಂದು ಈ ಸರಣಿ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಗೊಂಡಿದೆ. ಮಾಧುರಿ ದೀಕ್ಷಿತ್ ಅಭಿಮಾನಿಗಳಿಗೆ ಈ ಸರಣಿ ಖುಷಿ ಕೊಡಬಹುದು.

share
ಮುಸಾಫಿರ್
ಮುಸಾಫಿರ್
Next Story
X